ಮಂಗಳೂರು ಶಾರದಾ ಮಹೋತ್ಸವ ಶತಮಾನೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ಸಂಯೋಜಿಸಲ್ಪಡುವ ಶತಮಾನೋತ್ಸವ ಸಾಂಸ್ಕೃತಿಕ ಸಪ್ತಾಹದಲ್ಲಿ ಅಗೋಸ್ಟ್ 30 ಮಂಗಳವಾರ ಸಂಜೆ 4 ಕ್ಕೆ ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ , ಸಂಘಟಕ ,ಕಲಾಪೋಷಕ ಪಿ.ಸಂಜಯ ಕುಮಾರ್ ರಾವ್ ಅವರಿಗೆ ಶ್ರೀ ವಾಗೀಶ್ವರೀ ಶತಮಾನೋತ್ಸವ ಗೌರವ ಪ್ರಶಸ್ತಿ ನೀಡಿ ಸಂಮಾನಿಸಲಾಗುವುದು ಎಂದು ಸಪ್ತಾಹದ ಪ್ರಧಾನ ಸಂಯೋಜಕ ಆಚಾರ್ಯ ಮಠದ ಪಂಡಿತ್ ನರಸಿಂಹ ಆಚಾರ್ ಹಾಗೂ ವಾಗೀಶ್ವರೀ ಸಂಘದ ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿಯವರು ತಿಳಿಸಿದ್ದಾರೆ.
ಮಂಗಳೂರಿನ ಕುಡ್ತೇರಿ ಮಹಾಮಾಯಾ ದೇವಸ್ಥಾನದಲ್ಲಿ ಪ್ರತೀ ಭಾನುವಾರ ತಾಳಮದ್ದಳೆ ನಡೆಸುತ್ತಿರುವ ಶತಮಾನದ ಇತಿಹಾಸ ಉಳ್ಳ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದಲ್ಲಿ ಕಳೆದ ನಾಲ್ಕು ದಶಕಗಳಿಂದ ಸಕ್ರಿಯರಾಗಿ ಅರ್ಥಧಾರಿಯಾಗಿ ,ಚೆಂಡೆ ಮದ್ದಳೆ ಕಲಾವಿದರಾಗಿ ,ಆಟ ಕೂಟಗಳ ಸಂಯೋಜಕರಾಗಿರುವ ನ್ಯೂ ಇಂಡಿಯಾ ಇನ್ಷೂರೆನ್ಸ್ ಕಂಪೆನಿಯ ನಿವೃತ್ತ ಉಪ ಮಹಾ ಪ್ರಬಂಧಕ ಪಿ.ಸಂಜಯ ಕುಮಾರ್ ರಾವ್ ಅವರು ಪಟ್ಲ ಟ್ರಸ್ಟ್ ನ ಟ್ರಸ್ಟಿಯಾಗಿ , ಕಲಾವಿದರ ಗುಂಪು ವಿಮೆಯ ಸಂಯೋಜಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಶಾರದೋತ್ಸವ ಸಮಿತಿಯ ಡಾ.ಉಮಾನಾಥ ಮಲ್ಯ ,ವಾಗೀಶ್ವರೀ ಸಂಘದ ಪ್ರದೀಪ ಕುಮಾರ ಕಲ್ಕೂರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಪಟ್ಲ ಭಾಗವತಿಕೆಯ ತಾಳಮದ್ದಳೆ
ಈ ಕಾರ್ಯಕ್ರಮದಲ್ಲಿ ಪಟ್ಲ ಸತೀಶ ಶೆಟ್ಟಿ ಅವರ ಭಾಗವತಿಕೆಯಲ್ಲಿ ಶ್ರೀ ಸಿ.ಎಸ್. ಭಂಢಾರಿ ಪ್ರಾಯೋಜಕತ್ವದಲ್ಲಿ “ಶರಸೇತು ಬಂಧನ ” ಹಾಗೂ ಸತೀಶ್ ಶೆಟ್ಟಿ ಬೋಂದೆಲ್ ಭಾಗವತಿಕೆಯಲ್ಲಿ ” ತುಳುನಾಡ ಬಲಿಯೇಂದ್ರೆ” ತುಳು ತಾಳಮದ್ದಳೆ ಜರಗಲಿದೆ. ಡಾ.ಪ್ರಭಾಕರ ಜೋಷಿ , ಜಿ.ಕೆ.ಭಟ್ ಸೇರಾಜೆ ,ಭಾಸ್ಕರ ರೈ ಕುಕ್ಕುವಳ್ಳಿ ,ದಯಾನಂದ ಕತ್ತಲ್ ಸಾರ್ ಹಾಗೂ ಸಂಘದ ಕಲಾವಿದರು ಅರ್ಥಧಾರಿಗಳಾಗಿ ಭಾಗವಹಿಸಲಿರುವರು .