ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಆಶ್ರಯದಲ್ಲಿ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವತ, ಪ್ರಸಂಗಕರ್ತ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ರಾವ್ ಅವರ ನೆನಪು ಮಾಡಲಾಯಿತು.

ಪಟ್ಲ ಸಂಭ್ರಮದಲ್ಲಿ ವೇದಿಕೆಗೆ ಅಗರಿ ಶ್ರೀನಿವಾಸ್ ರಾವ್ ಅವರ ಹೆಸರಿಡಲಾಗಿತ್ತು. ಚೌಕಿ ಪೂಜೆಯ ಅನಂತರ ಅಗರಿ ವೇದಿಕೆಯನ್ನು ಭ್ರಮರಾಂಬಿಕೆಯ ಭಾವಚಿತ್ರದ ಬಳಿ ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಲಾಯಿತು.
ಶ್ರೀ ಶಾರದಾ ವಿದ್ಯಾಲಯದ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಹಾಗೂ ಅಗರಿ ರಾಘವೇಂದ್ರ ರಘುರಾಮ ರಾವ್ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.

ಪಟ್ಲ ಮಹಾಬಲ ಶೆಟ್ಟಿ, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಖಚಾಂಚಿ, ಸಿಎ ಸುದೇಶ್ ಕುಮಾರ್ ರೈ, ಕದ್ರಿ ನವನೀತ ಶೆಟ್ಟಿ, ಜಗದೀಶ ಶೆಟ್ಟಿ ಕಾರ್‌ಸ್ಟ್ರೀಟ್, ರವಿಚಂದ್ರ ಶೆಟ್ಟಿ ಅಶೋಕನಗರ, ಸವಣೂರು ಸೀತಾರಾಮ ರೈ, ಭುಜಬಲಿ ಧರ್ಮಸ್ಥಳ, ಪ್ರದೀಪ್ ಆಳ್ವ ಕದ್ರಿ ಹಾಗೂ ಟ್ರಸ್ಟ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಿಳಾ ಘಟಕದವರು ಅಗರಿ ಭಾಗವತರ ಶ್ರೀದೇವಿ ಮಹಾತ್ಮೆಯ ಮಹಿಷವಧೆ ಪ್ರಸಂಗವನ್ನು ಪ್ರದರ್ಶಿಸಿ ಅಗರಿ ಕೃತಿಗೆ ಗೌರವಾರ್ಪಣೆ ಮಾಡಿದರು.

error: Content is protected !!
Share This