ಪಿ. ಭಾಸ್ಕರ ತಂತ್ರಿಗಳಂಥ ಸಮರ್ಪಣಾಭಾವದ ಕಾರ್ಯಕರ್ತರಿರುವುದರಿಂದಲೇ ಯಕ್ಷಗಾನ ಕಲಾರಂಗ ಇಷ್ಟೊಂದು ಸಮಾಜಮುಖಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿದೆ. ಈ ಸಂಸ್ಥೆ ಉಳಿದವರಿಗೆ ಆದರ್ಶಪ್ರಾಯವಾದುದು ಎಂಬುದಾಗಿ ಎಂದು ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ನುಡಿದರು. ಸಂಸ್ಥೆಯೊಂದಿಗೆ ಒಡನಾಟ ನನಗೆ ಹಿತಾನುಭವ ನೀಡಿದೆ. ಸ್ವಾಮೀಜಿಯವರ ದಿವ್ಯಹಸ್ತದಿಂದ ಪ್ರಶಸ್ತಿ ಪಡೆದದ್ದು ನನ್ನ ಬದುಕಿನ ಸಾರ್ಥಕ್ಯದ ಕ್ಷಣ ಎಂದು ಸಮ್ಮಾನ ಸ್ವೀಕರಿಸಿ ಭಾಸ್ಕರ ತಂತ್ರಿಯವರು ಹೇಳಿದರು. ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಎಸ್. ವಿ.ಭಟ್ ಸಂಸ್ಥೆಯಲ್ಲಿ ಇಪ್ಪತ್ತೇಳು ವರ್ಷ ಕೋಶಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಎಸ್. ಗೋಪಾಲಕೃಷ್ಣರ ಸಂಸ್ಮರಣೆ ಮಾಡಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಯವರು ತಂತ್ರಿಗಳನ್ನು ಅಭಿನಂದಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಮತಿ ನಿರ್ಮಲಾ ಭಾಸ್ಕರ ತಂತ್ರಿ, ನಿಕಟಪೂರ್ವ ಅಧ್ಯಕ್ಷರಾದ ಕೆ. ಗಣೇಶ್ ರಾವ್, ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಕೋಶಾಧಿಕಾರಿಗಳಾದ ಮನೋಹರ್ ಕೆ ಮತ್ತು ಪ್ರೊ. ಸದಾಶಿವ ರಾವ್ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೆಕಾರ್ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಎಚ್.ಎನ್.ಶೃಂಗೇಶ್ವರ್ ಧನ್ಯವಾದ ಸಮರ್ಪಿಸಿದರು.

error: Content is protected !!
Share This