ಯಕ್ಷಕಲಾ ಪೊಳಲಿ ಅಶ್ರಯದಲ್ಲಿ 29ನೇ ವರ್ಷದ “ಪೊಳಲಿ ಯಕ್ಷೋತ್ಸವ-2024′, ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಸಮ್ಮಾನ, ಸಂಸ್ಮರಣೆ, ಬಯಲಾಟ ಅ.5ರಂದು ಪೊಳಲಿ ದೇವಸ್ಥಾನದ ರಾಜಾಂಗಣದಲ್ಲಿ ಜರಗಲಿದೆ.

ಈ ಬಾರಿಯ ಪೊಳಲಿ ಯಕ್ಷೋ ತ್ಸವ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಷಿ ಅವರಿಗೆ ಪ್ರದಾನ ಮಾಡಲಾಗುವುದು.

ಅರ್ಥಧಾರಿ ಶಂಭು ಶರ್ಮ ವಿಟ್ಲ, ಸುರೇಂದ್ರ ಮಲ್ಲಿ ಗುರುಪುರ, ಕೆ.ಎಚ್. ದಾಸಪ್ಪ ರೈ, ಸದಾಶಿವ ಕುಲಾಲ್ ವೇಣೂರು, ಶ್ರೀ ಧರ ಐತಾಳ್, ರವಿರಾಜ ಭಟ್ ಪನೆಯಾಲ, ಹಳುವಳ್ಳಿ ಗಣೇಶ ಭಟ್, ದಿನೇಶ ಶೆಟ್ಟಿ ಕಾವಳಕಟ್ಟೆ, ರವಿಶಂಕರ ವಳಕುಂಜ, ಮಾಧವ ಬಂಗೇರ ಕೊಳ್ತಮಜಲು, ಗುರುಪ್ರಸಾದ ಬೊಳಿಂಜಡ್ಕ ಅವರನ್ನು ಸಮ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಮತ್ತು ವಿನಾಯಕ ಯಕ್ಷಕಲಾ ಫೌಂಡೇಷನ್ ಕೆರೆಕಾಡು ಅವರಿಗೆ ಗೌರವಾರ್ಪಣೆ ನಡೆಯಲಿದೆ. ಇತ್ತೀ ಚೆಗೆ ಅಗಲಿದ ಸುಬ್ರಹ್ಮಣ್ಯ ಧಾರೇಶ್ವರ, ಪೆರುವಾಯಿ ನಾರಾಯಣ ಶೆಟ್ಟಿ, ಕುಂಬ್ಳೆ ಶ್ರೀ ಧರ ರಾವ್, ಗಂಗಾಧರ ಜೋಗಿ ಪುತ್ತೂರು ಅವರ ಸಂಸ್ಮರಣೆ ಜರಗಲಿದೆ.

ಸಂಜೆ 5ರಿಂದ ದಿನೇಶ ಅಮ್ಮಣ್ಣಾಯರ ಗಾನ ಸಾರಥ್ಯದಲ್ಲಿ “ಕಚ್ಚಾರ ಮಾಲ್ದಿ’ ಯಕ್ಷಗಾನ ಪ್ರದರ್ಶನವಾಗಲಿದೆ. ರಾತ್ರಿ 10ರಿಂದ “ಭಾರತರತ್ನ’ ಪ್ರಸಂಗ ನಡೆಯಲಿದೆ. ತೆಂಕು ತಿಟ್ಟಿ ನ ಪ್ರಸಿದ್ಧ 22 ಮಂದಿ ಹಿಮ್ಮೇ ಳ ಕಲಾವಿದರು , 67 ವೇಷಧಾರಿಗಳು ಸಹಿತ ಸುಮಾರು 90 ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದ

error: Content is protected !!
Share This