ಯಕ್ಷಗಾನ ಸಂಶೋಧನಾ ಕ್ಷೇತ್ರದಲ್ಲಿ ವಿಶೇಷವಾದ ಶ್ರದ್ಧೆ ಮತ್ತು ಪರಿಶ್ರಮದ ಮೂಲಕ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿ ನಲ್ಲಿ ನಾವು ಸ್ವಪ್ರಯತ್ನದಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದ ಮುಳಿಯ ತಿಮ್ಮಪ್ಪಯ್ಯರ ಮಾದರಿಯನ್ನು ಅನುಸರಿಸಬೇಕಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಶನ್, ಎಂಜಿಎಂ ಕಾಲೇಜು ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಡಾ.ಎಂ.ಪ್ರಭಾಕರ ಜೋಶಿ ಅವರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

 ಜಾತಿ ಎಂಬುದು ಒಂದು ಕಠಾರಿಯೂ, ಒಂದು ಗುರಾಣಿಯೂ ಆಗಿರುವ ಇಂದಿನ ಸಂದರ್ಭದಲ್ಲಿ ಮುಳಿಯ ತಿಮ್ಮಪ್ಪಯ್ಯ, ತನ್ನ ಬರಹಗಳಲ್ಲಿ ತನ್ನ ಜಾತಿಯಲ್ಲಿನ ತಪ್ಪಿನ ಬಗ್ಗೆ ವಿಮರ್ಶೆ ಹಾಗೂ ಟೀಕೆ ಮಾಡುವ ಧೈರ್ಯವನ್ನು ತೋರಿಸಿದ್ದರು. ಈ ನಿಟ್ಟಿನಲ್ಲಿ ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯವನ್ನು ನಾವು ಅವಲೋಕಿಸಬೇಕಾಗಿದೆ ಎಂದರು.

ಇಂದು ವಿಶ್ವವಿದ್ಯಾನಿಲಯಗಳು ಪಿಎಚ್‌ಡಿ ಮಾಡಲು ಸಂಶೋಧನಾ ಕೇಂದ್ರವನ್ನು ನೀಡಿದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವವರಿಲ್ಲ. ಪಿಎಚ್‌ಡಿ ಪದವಿ ಪಡೆದ ತಕ್ಷಣ ಸಂಶೋಧನೆ ಕೊನೆಗೊಳ್ಳುವುದಿಲ್ಲ. ನಂತರವೂ ತನ್ನ ಅಧ್ಯಯನವನ್ನು ಮುಂದುವರೆಸುವವರೇ ನಿಜವಾದ ಸಂಶೋಧಕರಾಗು ತ್ತಾರೆ. ಯಾಕೆಂದರೆ ಸಂಶೆಧನೆಗೆ ಕೊನೆ ಎಂಬುದಿಲ್ಲ ಎಂದರು.

ಸಂಸ್ಕೃತದ ಪರವಾಗಿ ಮಾತನಾಡುವವರು ಮೊದಲು ತುಳು ಭಾಷೆಯನ್ನು ಸರಿಯಾಗಿ ತಿಳಿದುಕೊಂಡು ಸಂಸ್ಕೃತವನ್ನು ಸರಿ ಮಾಡಿಕೊಳ್ಳ ಬೇಕು. ಸಂಸ್ಕೃತ ದೇವ ಭಾಷೆ ಅಲ್ಲ. ದೇಶಿಯ ಮೂಲಕವೇ ಶಿಷ್ಟವನ್ನು ಕಟ್ಟಬೇಕೇ ಹೊರತು ಶಿಷ್ಟ ದಿಂದಲೇ ಎಲ್ಲವನ್ನು ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

 ಪ್ರಶಸ್ತಿ ಸ್ವೀಕರಿಸಿದ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ, ಯಕ್ಷಗಾನ ಬಹುವಿಧವಾಗಿ ಬೆಳೆದ ಪರಿಣಾಮ ಇಂದು ವಿಮರ್ಶ ಪಂಥಕ್ಕೂ ಯಕ್ಷಗಾನಕ್ಕೂ ಸಂಬಂಧ ಇಲ್ಲವಾಗಿದೆ. ಸೈದ್ಧಾಂತಿಕವಾಗಿ ದೃಢತೆ, ಮುನ್ನೋಟ ಉಳ್ಳ, ಯಕ್ಷಗಾನದ ಸಂರಕ್ಷಣೆ, ಸಂವರ್ಧನೆ, ಪರಿಷ್ಕರಣೆಗೆ ಬದ್ಧವಾಗಿರುವ ವಿಮರ್ಶ ಪಂಥ ಬೆಳೆಯಬೇಕು. ಅದುವೇ ನಾವು ತಿಮ್ಮಪ್ಪಯ್ಯ ಅವರಿಗೆ ನೀಡುವ ಕಾಣಿಕೆಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯು ಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಮಾತನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಎಂ. ಎಲ್.ಸಾಮಗ ಅಭಿನಂದನಾ ಭಾಷಣ ವಾಡಿದರು.

ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಮನೋರಮ ಎಂ.ಭಟ್, ಮುಳಿಯ ತಿಮ್ಮಪ್ಪಯ್ಯರ ಮಕ್ಕಳಾದ ಗೋಪಾಲಕೃಷ್ಣ ಭಟ್, ಮುಳಿಯ ರಾಘವಯ್ಯ ಉಪಸ್ಥಿತರಿದ್ದರು. ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಶ್ಮಿತಾ ಎ. ವಂದಿಸಿದರು, ಡಾ.ನರಸಿಂಹ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

(ವಾರ್ತಾಭಾರತಿ)

error: Content is protected !!
Share This