ಆರಂಭ:1999

ಯಕ್ಷಗಾನ ಕಲೆ, ಪರಂಪರೆಯಿಂದ ಜಾರಿ ಅನ್ಯ ಕಲಾಪ್ರಕಾರಗಳ ಆಘಾತದಿಂದ ತತ್ತರಿಸಲಾರಂಭಿಸಿದಾಗ ಪರಂಪರೆಯ ಚೆಲುವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ ಮಹನೀಯರಲ್ಲಿ ಪ್ರೊ. ಬಿ. ವಿ. ಆಚಾರ್ಯ ಒಬ್ಬರು. ಶ್ರೀಯುತರು ವೃತ್ತಿಯಲ್ಲಿ ಉಡುಪಿ ಎಂ.ಜಿ. ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಹಿರಿಯ ಶ್ರೇಷ್ಠ ಕಲಾವಿದರ ತಂಡವನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಪ್ರದರ್ಶನ ನೀಡಿ ಬಡಗುತಿಟ್ಟಿನ ಪರಂಪರೆಯ ಘನತೆಯನ್ನು ಎತ್ತಿ ಹಿಡಿದ ಕೀರ್ತಿಗೆ ಭಾಜನರು. ಕಲಾವಿದರಿಗೆ ಪ್ರೋತ್ಸಾಹ, ಆರ್ಥಿಕ ನೆರವು ನೀಡುತ್ತ ಬಂದ ಪ್ರೊ. ಆಚಾರ್ಯರು ಯಕ್ಷಗಾನ ಕಲಾರಂಗದ ಸ್ಥಾಪಕರಲ್ಲೊಬ್ಬರು. ಡಾ| ಬಿ. ಬಿ. ಶೆಟ್ಟರ ನಿಧನದ ಬಳಿಕ ಎರಡು ವರ್ಷ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದವರು. ಸಂಸ್ಥೆ ಅವರ ಕುರಿತು ಪರಿಚಯಾತ್ಮಕ ಪುಸ್ತಕ ಸೇವಾಸಿಂಧು ಹೊರತಂದಿದೆ. ಯಕ್ಷಗಾನ ಕಲೆ-ಕಲಾವಿದರಿಗೆ ಶ್ರೀಯುತರ ಅಪೂರ್ವ ಕೊಡುಗೆಯನ್ನು ಅನುಲಕ್ಷಿಸಿ ಈ ಚೇತನದ ಸ್ಮರಣೆಯಲ್ಲಿ ಸಂಸ್ಥೆಯು ಈ ಪ್ರಶಸ್ತಿ ಸ್ಥಾಪಿಸಿದೆ.

ಈವರೆಗಿನ ಪ್ರಶಸ್ತಿ ಪುರಸ್ಕೃತರು

1. ನೆಲ್ಲೂರು ನಾರಾಯಣ ಭಾಗವತ
2. ಕೋಟ ವೈಕುಂಠ
3. ಗೋರ್ಪಾಡಿ ತಲ ಪಾಟೀಲ
4. ಹಾರಾಡಿ ಮಹಾಬಲ ಗಾಣಿಗ
5. ಮೊಳಹಳ್ಳಿ ಹೆರಿಯ ನಾಯ್ಕ
6. ಪೆರುವೋಡಿ ನಾರಾಯಣ ಭಟ್
7. ಜಲವಳ್ಳಿ ವೆಂಕಟೇಶ ರಾವ್
8. ದರ್ಲ್ಯಾಣಿ ನಾಗೇಶ ಶೆಟ್ಟಿ
9. ಪೇತ್ರಿ ಮಾದು ನಾಯ್ಕ
10. ಅರಾಟೆ ಮಂಜುನಾಥ
11. ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ
12. ಶಿವರಾಮ ಜೋಗಿ13. ಕೋಡಿ ಕೃಷ್ಣ (ಕುಷ್ಟ ಗಾಣಿಗ
14. ಸುರೇಶ್ ಗಾಣಿಗ
15. ನಾರಾಯಣ ಪೂಜಾರಿ
16. ಬ್ರಹ್ಮಾವರ ಕೃಷ್ಣ ಸುವರ್ಣ
17. ವೆಂಕಪ್ಪ ಅಮೀನ್ ಬ್ರಹ್ಮಾವರ
18. ಎಳ್ಳಂಪಳ್ಳಿ ಜಗನ್ನಾಥ್ ಆಚಾರಿ  

ಕಲಾಂತರಂಗ

error: Content is protected !!
Share This