ಬಸ್ತಿ ವಾಮನ ಶೆಣೈ – ನಾಡಿನ, ದೇಶದ ಸಾಂಸ್ಕೃತಿಕ ಇತಿಹಾಸದ ಒಂದು ಅಧ್ಯಾಯ ವ್ಯಕ್ತಿತ್ವ, ಅಧ್ಯಯನಕ್ಕೆ ವಸ್ತುವಾಗುವ ವ್ಯಕ್ತಿತ್ವ ಬ್ಯಾಂಕ್ ಅಧಿಕಾರಿ, ಸಾಮಾಜಿಕ ಕಾರ್ಯಕರ್ತ, ಸಂಸ್ಕೃತಿ ಸಂಘಟನೆಯ ದೊಡ್ಡನಾಯಕ, ಮಿತ್ರ, ಹಿತೈಷಿ ಎಲ್ಲಾ ನೆಲೆಗಳಲ್ಲಿ ಅದ್ಭುತ ವಿರಳ ಶ್ರೀಸಾಮಾನ್ಯ –
ಮಹನೀಯರು ಬಸ್ತಿ ಮಾಮ್.

ಕೊಂಕಣಿ ಭಾಷೆ ಸಂಸ್ಕೃತಿ, ಜನಾಂಗದ ಸೇವೆ ಸಂಘಟನೆಗಳನ್ನು ಒಂದು ವ್ರತವಾಗಿ ಸ್ವೀಕರಿಸಿ ಅದನ್ನು ಪುತ್ರ ಸಂಪೂರ್ಣ ಬದ್ಧತೆಯಿಂದ ನಿರ್ವಹಿಸಿದ ಮಹಾ ನೇತಾರ ಕಾರ್ಯಕರ್ತರವರು. ಅವರ ಕಾರ್ಯವಿಧಾನವೂ ಅವರಂತೆ ವಿಶಿಷ್ಟ ಮೃದುವಾದ ಛಲ- ಪಟ್ಟುಬಿಡದೆ ತಾಳ್ಮೆಯಿಂದ ಮಾಡುವ ಸತತ ಕಾರ್ಯಾಚರಣೆ , ನಿರಂತರ ಫಾಲೋಅಪ್… ಸಮನ್ವಯ ಸ್ನೇಹ… ಇದು ಭಕ್ತಿ ವಿಧಾನ. ದಶಕಗಳ ಶ್ರಮ ಪರಿಶ್ರಮಗಳಿಂದ ಅವರು ಕಟ್ಟಿ ಬೆಳೆಸಿರುವ, ಮಂಗಳೂರು ಶಕ್ತಿ ನಗರದಲ್ಲಿರುವ ‘ವಿಶ್ವ ಕೊಂಕಣಿ ಕೇಂದ್ರ – ಕೊಂಕಣಿ ಭಾಸ ಅನಿ ಸಂಸ್ಕೃತಿ ಪ್ರತಿಷ್ಠಾನ’ ಅವಳಿ ಸಂಸ್ಥೆಗಳು ಅವರ ಚಿರಸ್ಮೃತಿಗಳು. ಅವರು ಕವಿಗಳ ಕವಿ. ಕಲಾವಿದರ ಕಲಾವಿದ, ಯಕ್ಷಗಾನ ಕಲೆಯಲ್ಲೂ ಅವರಿಗಿದ್ದ ವಿಶೇಷ ಅಭಿಮಾನವೂ ಸ್ಮರಣೀಯ , ಬಂಟ್ವಾಳ ತಿರುಮಲ ವೆಂಕಟರಮಣ ಯಕ್ಷಗಾನ ಸಂಘಕ್ಕೂ ಅವರು ಪದಾಧಿಕಾರಿಯಾಗಿ ಸಕ್ರಿಯ ಪೋಷಕರಾಗಿದವರು.

ಬಹುಮುಖಿ ಸಾಧನೆಗಳ ಮೂಲಕ ಸರದಾರ ಬಿರುದನ್ನೂ, ಬಸ್ತಿ ವಾಮನ ಶೆಣೈ ಶಬ್ದಗಳನ್ನೂ ಐತಿಹಾಸಿಕವಾಗಿ ಅನ್ವರ್ಥಗೊಳಿಸಿದ ಸಂಸ್ಕೃತಿ ಸಂತ ಬಸ್ತಿ ವಾಮನ ಶೆಣೈಯವರು.’

  • ಡಾ.ಎಂ, ಪ್ರಭಾಕರ ಜೋಶಿ, ಮಂಗಳೂರು

(ಹೊಸದಿಗಂತ)

error: Content is protected !!
Share This