ಸಾಮಗ್ರಿಗಳು
ಅಕ್ಕಿ – ಒಂದು ಕಪ್, ಬಾಳೆ ಹಣ್ಣು – ನಾಲ್ಕೈದು, ಉಪ್ಪು, ನೀರು, ತುಪ್ಪ/ಎಣ್ಣೆ
ಮಾಡುವ ಕ್ರಮ
ಅಕ್ಕಿಯನ್ನು ಒಂದು ಗಂಟೆ ನೆನೆ ಹಾಕಬೇಕು. ಆಮೇಲೆ ಅದನ್ನು ಉಪ್ಪು ಸೇರಿಸಿ ಸ್ವಲ್ಪ ರುಬ್ಬಿ, ಬಾಳೆ ಹಣ್ಣನ್ನು ಸುಲಿದು ಅದಕ್ಕೆ ಸೇರಿಸಬೇಕು. ನಂತರ ಮತ್ತೊಮ್ಮೆ ನುಣ್ಣಗಾಗುವರೆಗೆ ರುಬ್ಬಿದರೆ ಬಾಳೆ ಹಣ್ಣು ದೋಸೆಗೆ ಹಿಟ್ಟು ತಯಾರು. ಒಂದು ಕಾವಲಿಗೆಗೆ ತುಪ್ಪ/ಎಣ್ಣೆ ಸವರಿ ದೋಸೆ ಎರೆದು ಎರಡೂ ಕಡೆ ಬೇಯಿಸಬೇಕು.