ಬಿ.ಎ.ವಿವೇಕ ರೈ

ಟಿ.ವಿ.ಮೋಹನದಾಸ್ ಪೈ ಅವರು ರಾಷ್ಟ್ರಕವಿ ಗೋವಿಂದ ಪೈ ಅವರ ಬಗೆಗಿನ ಗೌರವದಿಂದ ಶ್ರೀಮತಿ ವಿಮಲಾ ಟಿ ಪೈ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿ ಇದು. ಇದರ ನಿರ್ವಹಣೆಯ ಪೂರ್ಣ ಜವಾಬ್ದಾರಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದವರದ್ದು. ಆ ಕೇಂದ್ರದವರು ತಜ್ಞರ ಸಮಿತಿ ರಚಿಸಿ, ಆ ಸಮಿತಿಯ ಶಿಫಾರಸಿನಂತೆ ಪ್ರಶಸ್ತಿಯನ್ನು ಘೋಷಿಸುತ್ತಾರೆ. ಪ್ರಶಸ್ತಿ ಸಮಿತಿಯ ನಿಯಮದಂತೆ ಕನ್ನಡ ಸಾಹಿತ್ಯ, ಸಂಶೋಧನೆ ಮತ್ತು ಇತಿಹಾಸ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಈ ಪ್ರಶಸ್ತಿಯನ್ನು ಕೊಡುತ್ತಾರೆ. ಜ್ಞಾನಪೀಠ, ಸರಸ್ವತಿ ಸಮ್ಮಾನ್, ಪಂಪ ಪ್ರಶಸ್ತಿ ಪಡೆದವರನ್ನು ಸಾಮಾನ್ಯವಾಗಿ ಪರಿಗಣಿಸಲಾಗುವುದಿಲ್ಲ ಎಂಬ ಸಾಮಾನ್ಯ ನಿಯಮ ಮಾಡಿಕೊಂಡಿದ್ದಾರೆ.

ಗೋವಿಂದ ಪೈ ಅವರ ಪುಣ್ಯದಿನವಾದ ಸಪ್ಟೆಂಬರ್೬ ರಂದು ಪ್ರಶಸ್ತಿಪ್ರದಾನ ಮಾಡುತ್ತಾರೆ.
ಈ ವರೆಗೆ ಈ ಪ್ರಶಸ್ತಿಯನ್ನು ಪಡೆದವರು:

1. ಡಾ.ಶ್ರೀನಿವಾಸ ರಿತ್ತಿ (೨೦೧೩)
ಕರ್ನಾಟಕ ವಿವಿ ಧಾರವಾಡದ ಪ್ರಾಚೀನ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕರು.
2. ಪ್ರೊ.ಕೆ .ಎಸ್ ನಿಸಾರ್ ಅಹಮದ್ (೨೦೧೪)
ಕನ್ನಡದ ಹಿರಿಯ ಕವಿಗಳು, ಅನುವಾಕರು
3. ಪ್ರೊ.ಬಿ.ಸುರೇಂದ್ರ ರಾವ್ (೨೦೧೫)
ಮಂಗಳೂರು ವಿವಿ, ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕರು.
4. ಡಾ.ಕೆ.ವಿ.ತಿರುಮಲೇಶ್ (೨೦೧೭)
ಕನ್ನಡದ ಹಿರಿಯ ಕವಿ, ವಿಮರ್ಶಕರು, ಭಾಷಾವಿಜ್ಞಾನಿ
5. ಪ್ರೊ.ಅಮೃತ ಸೋಮೇಶ್ವರ ( ೨೦೧೯)
ಕನ್ನಡ – ತುಳು ಭಾಷೆಯ ಹಿರಿಯ ಕವಿ,ಜಾನಪದ ಸಂಶೋಧಕರು.ಯಕ್ಷಗಾನದ ಪ್ರಸಂಗ ಕರ್ತರು, ಸಂಶೋಧಕರು
6. ಡಾ.ಅ.ಸುಂದರ (೨೦೨೦)
ಕರ್ನಾಟಕದ ಆರ್ಕಿಯಾಲಜಿ ಮ್ಯೂಸಿಯಂ ನ ಮುಖ್ಯಸ್ಥರಾಗಿ ಇದ್ದವರು. ಹಿರಿಯ ಪ್ರಾಕ್ತನಶಾಸ್ತ್ರ ವಿದ್ವಾಂಸರು
7. ಬಿ.ಎ.ವಿವೇಕ ರೈ(೨೦೨೨)

೨೦೧೬ಮತ್ತು ೨೦೧೮ರಲ್ಲಿ ಕಾರಣಾಂತರದಿಂದ ಪ್ರಶಸ್ತಿಯನ್ನು ಕೊಟ್ಟಿಲ್ಲ.

ಕೃತಜ್ಞತೆ

ಆತ್ಮೀಯ ಡಾ ಪ್ರಭಾಕರ ಜೋಶಿ ಅವರೇ..

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನೀಡುವ ‘ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕಪ್ರಶಸ್ತಿ ೨೦೨೨’ ನ್ನು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನೀಡುವ ‘ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕಪ್ರಶಸ್ತಿ ೨೦೨೨’ ನ್ನು ನನಗೆ ಕೊಡಮಾಡುವ ಸುದ್ದಿಯನ್ನು ತಿಳಿದು ನೀವು ವಾಟ್ಸ್ ಅಪ್,ಫೋನ್ ಮತ್ತು ಇಮೇಲ್ ಮೂಲಕ ನನಗೆ ಅಭಿನಂದನೆಗಳನ್ನು ಕಳುಹಿಸಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸ ಅಭಿಮಾನಗಳಿಗೆ ನಾನು ವಿಶೇಷ ಕೃತಜ್ಞನಾಗಿದ್ದೇನೆ. ಪ್ರಶಸ್ತಿಗಿಂತಲೂ ನಿಮ್ಮ ಆದರ, ಸಹೃದಯತೆ ನನಗೆ ಹೆಚ್ಚು ಸಂತೋಷ ತಂದಿದೆ. ನನ್ನ ವಿದ್ಯಾರ್ಥಿಗಳು ಅಭಿಮಾನಿಗಳು ಸ್ನೇಹಿತರು ಸಂಭ್ರಮಪಟ್ಟಿದ್ದೀರಿ.

ಕನ್ನಡದ ಹಿರಿಯರು, ಹಿರಿಯ ಸಾಹಿತಿಗಳು ಫೋನ್ ಮತ್ತು ವಾಟ್ಸ್ ಅಪ್ ಸಂದೇಶಗಳ ಮೂಲಕ ಅಭಿನಂದನೆಗಳನ್ನು ಸಲ್ಲಿಸಿರುವುದು ನನ್ನ ಭಾಗ್ಯವಿಶೇಷವೆಂದು ಭಾವಿಸುತ್ತೇನೆ.

ಮತ್ತೊಮ್ಮೆ ತಮ್ಮ ಪ್ರೀತಿ ವಿಶ್ವಾಸಗಳಿಗೆ ವಂದಿಸುತ್ತೇನೆ.

  • ಬಿ.ಎ.ವಿವೇಕ ರೈ, ಮಂಗಳೂರು
error: Content is protected !!
Share This