ಕಲಾಶ್ರೀ ಯಕ್ಷಗಾನ ತರಬೇತಿ ಸಂಸ್ಥೆ ಸ್ಥಾಪಿಸಿ ನೂರಾರು ಕಲಾವಿದರಿಗೆ ಸಾಂಪ್ರದಾಯಿಕ ಶಿಕ್ಷಣ ನೀಡಿರುವ ಚೇರ್ಕಾಡಿ ಮಂಜುನಾಥ ಪ್ರಭು ಯಕ್ಷಸಾರ್ವಭೌಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಮಣಿಪಾಲ ಸರಳೇಬೆಟ್ಟು ಬಾಲಮಿತ್ರ ಯಕ್ಷಶಿಕ್ಷಣ ಪ್ರತಿಷ್ಠಾನ ಸಂಚಾಲಕ ಕಮಲಾಕ್ಷ ಪ್ರಭು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.18ರಂದು ಚೇರ್ಕಾಡಿ ಹೈಸ್ಕೂಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಗುರುನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಶಸ್ತಿ 25 ಸಾವಿರ ರೂ. ನಗದು ಹಾಗೂ ಸನ್ಮಾನ ಪತ್ರ, ಫಲಕ ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಶಿಷ್ಯರಿಂದ ಕ್ಷೇಮ ನಿಧಿ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಾಲಮಿತ್ರ ಯಕ್ಷಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ ಸದಾನಂದ ಪಾಟೀಲ್, ಪ್ರೊ. ಎಸ್.ಯು. ಉದಯಕುಮಾರ್ ಶೆಟ್ಟಿ, ಕೆ.ಎಸ್. ಜೈವಿಠಲ್, ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.

error: Content is protected !!
Share This