ತೆಂಕುತಿಟ್ಟಿನ ಹಿರಿಯ ಚಂಡೆ-ಮದ್ದಲೆ ವಾದಕರಾದ ಮಿಜಾರು ರಾಮಕೃಷ್ಣ ಶೆಟ್ಟಿಗಾರ್ (76 ವರ್ಷ) 21-05-2023ರಂದು ಅಶ್ವತ್ಥಪುರದ ಮಿಜಾರಿನಲ್ಲಿ ನಿಧನರಾದರು. ಕೂಡ್ಲು, ಮಂಗಳಾದೇವಿ, ಉಳ್ಳಾಲ ಭಗವತಿ ಮತ್ತು 25 ವರ್ಷಕ್ಕೂ ಮೇಲ್ಪಟ್ಟು ಕಟೀಲು ಮೇಳದಲ್ಲಿ ಹೆಚ್ಚಿನ ಪ್ರಸಿದ್ಧ ಭಾಗವತರಿಗೆ ಚಂಡೆ-ಮದ್ದಲೆ ವಾದಕರಾಗಿ ಕಲಾಸೇವೆಗೈದಿದ್ದರು. ಪೂರ್ವರಂಗದ ಹಾಡುಗಳನ್ನು ಹಾಡುವ ಕ್ರಮವನ್ನು ತಿಳಿದಿದ್ದರು. 2020ರಲ್ಲಿ ಇವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

error: Content is protected !!
Share This