ಅಭಿಜಾತ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ (67) ನಿನ್ನೆ ರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು‌. ಒಂದುವರೆ ವರ್ಷದ ಹಿಂದೆ ರಸ್ತೆ‌ ಅಪಘಾತದಲ್ಲಿ‌‌ ತಲೆಗೆ ಪೆಟ್ಟಾಗಿ ನಿಧಾನ ಚೇತರಿಸಿಕೊಳ್ಳುತ್ತಿದ್ದರು. ಅವರು ತಾಯಿ, ಪತ್ನಿ, ಇಬ್ಬರು‌ ಪುತ್ರರನ್ನು‌ ಅಗಲಿದ್ದಾರೆ.

ಗುಂಡುಬಾಳ‌‌ ಮೇಳದಲ್ಲಿ ಸೋದರಮಾವ‌ ಹಡಿನಬಾಳ ಸತ್ಯ ಹೆಗಡೆ ಆಶ್ರಯದಲ್ಲಿ ಯಕ್ಷಗಾನ ಕಲಿತು ಮುಂದೆ ಅಮೃತೇಶ್ವರೀ,‌ ಹಿರೇಮಹಾಲಿಂಗೇಶ್ವರ, ಪೆರ್ಡೂರು, ಬಚ್ಚಗಾರು, ಸಾಲಿಗ್ರಾಮ, ಮಂದಾರ್ತಿ ಮತ್ತು ಕೆರೆಮನೆ ಮೇಳಗಳಲ್ಲಿ ನಾಲ್ಕುವರೆ ದಶಕಗಳ ಕಲಾಸೇವೆ‌ಗೈದಿದ್ದರು. ಪಾತ್ರಕ್ಕೊಪ್ಪುವ ವೇಷಗಾರಿಕೆ, ಭಾವಪೂರ್ಣ ಅಭಿನಯ, ಅರ್ಥಪೂರ್ಣ ಮಾತುಗಾರಿಕೆಯಿಂದ ಹಲವು ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಕಟ್ಟಿಕೊಟ್ಟಿದ್ದರು.

ಯಕ್ಷಗಾನ ಕಲಾರಂಗಕ್ಕೆ‌ ಅವರ ಸಂಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಿದ‌ ಸಂತೃಪ್ತಿಯಿದೆ. ಪದ್ಮಶ್ರೀ ಚಿಟ್ಟಾಣೆ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಕ್ಕೆ ಭಾಜನರಾದ ಅವರಿಗೆ ಸಂಸ್ಥೆ “ಯಕ್ಷಗಾನ ಕಲಾರಂಗ ಪ್ರಶಸ್ತಿ” ನೀಡಿ ಗೌರವಿಸಿದೆ. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ‌ ರಾವ್, ಕಾರ್ಯದರ್ಶಿ ಮುರಲಿ‌ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!
Share This