
ಅಮೇರಿಕಾದಲ್ಲಿ ನ್ಯೂಕ್ಲಿಯರ ಇಂಜನೀಯರ್ ಆಗಿ ನಿವೃತ್ತರಾಗಿರುವ ವತ್ಸ ಕುಮಾರ್ ಇಂದು (27.09.24) ಯಕ್ಷಗಾನ ಕಲಾರಂಗದ ಕಛೇರಿಗೆ ಭೇಟಿ ನೀಡಿ ನೂತನ ಕಟ್ಟಡ ವೀಕ್ಷಿಸಿ, ಸಂಸ್ಥೆಯ ಕಾರ್ಯಚಟುವಟಿಕೆ ಆಲಿಸಿ ಸಂತಸ ಪಟ್ಟರು. ಯಕ್ಷಗಾನ ಪ್ರಿಯರಾದ ಇವರು ಅಮೇರಿಕಾದಲ್ಲಿ ಕನ್ನಡದ ರಾಯಭಾರಿಯಾಗಿ ಮೂರ್ನಾಲ್ಕು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ.2000 ನೇ ಇಸವಿಯಲ್ಲಿ ಅಮೆರಿಕಾದಲ್ಲಿ ಮೊತ್ತಮೊದಲ ಅಕ್ಕ ಸಮ್ಮೇಳನ ನಡೆಸಿದ ಕೀರ್ತಿ ಮಾನ್ಯ ವತ್ಸ ಕುಮಾರ್ ರಿಗೆ ಸಲ್ಲುತ್ತದೆ.ಅವರೊಂದಿಗೆ ಅಲ್ಲಿ ಮೂರು ದಶಕಗಳಿಂದ ಯಕ್ಷಗಾನ ಮತ್ತು ಸಮಾಜಪರ ಕೆಲಸ ಮಾಡುತ್ತಿರುವ ಸಂಸ್ಥೆಯ ಹಿತೈಶಿಗಳಾದ ಪಣಂಬೂರು ವಾಸುದೇವ ಐತಾಳ -ಮೀನಾಕ್ಷಿ ಐತಾಳ ದಂಪತಿಗಳು ಕಲಾರಂಗಕ್ಕೆ ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಡಾ. ವಿರೂಪಾಕ್ಷ ದೇವರುಮನೆ ಉಪಸ್ತಿತರಿದ್ದರು. ಕಾರ್ಯದರ್ಶಿ ಸಂಸ್ಥೆಯ ಕಾರ್ಯ ಚಟುವಟಿಕೆ ಪರಿಚಯಿಸಿದರು. ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ಎಸ್.ವಿ.ಭಟ್ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು.
