ಡಾ. ಸುಧಾಮೂರ್ತಿಯವರು ಅಧ್ಯಕ್ಷರಾಗಿರುವ ಇನ್‍ಫೋಸಿಸ್ ಫೌಂಡೇಶನ್‍ನ ಪ್ರಯೋಜಕತ್ವದಲ್ಲಿ 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 2 ಅಂತಸ್ತುಗಳ “ಇನ್‍ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‍ಮೆಂಟ್, ಟ್ರೈನಿಂಗ್ ಮತ್ತು ರಿಸರ್ಚ್ ಸೆಂಟರ್” ಕಟ್ಟಡದ ಶಿಲಾನ್ಯಾಸವನ್ನು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನೆರವೇರಿಸಿದರು.

ಉಡುಪಿ ಶಾರದಾ ಕಲ್ಯಾಣ ಮಂಟಪ ಮತ್ತು ಬೀಡಿನಗುಡ್ಡೆ ರಸ್ತೆಯ ಸನಿಹದಲ್ಲಿರುವ ಕಲಾರಂಗದ 18 ಸೆಂಟ್ಸ್ ಸ್ಥಳದಲ್ಲಿ ಶಿಲಾನ್ಯಾಸವು ಫೆಬ್ರವರಿ 7, 2020 ರಂದು ನೆರವೇರಿದ್ದು ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮತ್ತು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಡಾ. ಜಿ. ಶಂಕರ್ ವಹಿಸಿದ್ದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್, ಮಾಹೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಚ್. ಎಸ್. ಬಲ್ಲಾಳ್ ಮತ್ತು ಉಜ್ವಲ್ ಡೆವಲಪ್ಪರ್ಸ್‍ನ ಶ್ರೀ ಪುರುಷೋತ್ತಮ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಮಾರಂಭದ ಪೂರ್ವದಲ್ಲಿ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸ್ಥಳಕ್ಕೆ ಭೇಟಿನೀಡಿ ಶುಭವಾಗಲೆಂದು ಪ್ರಾರ್ಥನೆಗೈದರು. ವೇದಮೂರ್ತಿ ಸೀತಾರಾಮ್ ಭಟ್ ಧಾರ್ಮಿಕ ವಿಧಿ ನೆರವೇರಿಸಿದರು. ಈ ಕಟ್ಟಡವು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.

error: Content is protected !!
Share This