ಕೋವಿಡ್ 19 ರ ಹಿನ್ನೆಲೆಯಲ್ಲಿ ಸರಕಾರದ ಆದೇಶದ ಅನುಸಾರ ಕಲಾರಂಗ ಆಯೋಜಿಸಲಿರುವ ಮೇ ತಿಂಗಳ ಕೊನೆಯ ವಾರದ ತಾಳಮದ್ದಲೆ ಸಪ್ತಾಹ, ಮೇ 31 ರ ಕಲಾವಿದರ ಸಮಾವೇಶ, ಜುಲೈ ತಿಂಗಳ ಮೊದಲ ಮತ್ತು ಎರಡನೇ ಭಾನುವಾರದಲ್ಲಿ ಜರುಗುತ್ತಿದ್ದ ತೆಂಕು ಬಡಗುತಿಟ್ಟುಗಳ ಹಗಲು ಯಕ್ಷಗಾನ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದ್ದು ಮತ್ತು ಜುಲೈ ತಿಂಗಳ ಎರಡನೇ ಶನಿವಾರದಲ್ಲಿ ಆಯೋಜಿಸಲ್ಪಡುವ ವಾರ್ಷಿಕ ಮಹಾಸಭೆಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಲಾಗಿದ್ದು ಸಂಸ್ಥೆಯ ಸದಸ್ಯರು, ಕಲಾವಿದರು ಹಾಗೂ ಕಲಾಭಿಮಾನಿಗಳ ಸಹಕಾರವನ್ನು ಕೋರುತ್ತಿದ್ದೇವೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಮತ್ತು ಕಾರ್ಯದರ್ಶಿ ಮುರಲೀ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಜೀವನ್ ಆನಂದ್ ವಿಮಾ ಕಂತು ಕಟ್ಟ ಬೇಕಾದ ಕಲಾವಿದರು ಕೋಶಾಧಿಕಾರಿ ಕೆ.ಮನೋಹರ ಅವರನ್ನು ಸಂಪರ್ಕಿಸ ಬೇಕು.
ದೂರವಾಣಿ: 9449451898

error: Content is protected !!
Share This