ಬಿದ್ಕಲ್‍ಕಟ್ಟೆಯ ಸೌಕೂರು ಮೇಳದ ಕಲಾವಿದ ನಂದಕುಮಾರ್ ಪಾಣರ ಇವರಿಗೆ ನಿರ್ಮಿಸಿಕೊಡಲಿರುವ ನೂತನ ಮನೆಯ ಶಿಲಾನ್ಯಾಸ ಇಂದು (02.12.2023) ಜರಗಿತು. ಮನೆಯ ಪ್ರಾಯೋಜಕರಾದ ಶೋಭಾ ವಿ. ಅಚಾರ್ಯ ಮತ್ತು ವಸಂತ ಆಚಾರ್ಯ ಶಿಲಾನ್ಯಾಸ ಮಾಡಿದರು. ಹಿರಿಯರಾದ ಯು. ಎಸ್. ರಾಜಗೋಪಾಲ ಆಚಾರ್ಯರು ದೇವತಾ ಪ್ರಾರ್ಥನೆ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಗದರ್ಶಕರಾದ ಯು. ವಿಶ್ವನಾಥ ಶೆಣೈ, ಉಪಾಧ್ಯಕ್ಷರಾದ ವಿ. ಜಿ. ಶೆಟ್ಟಿ, ಜತೆಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ, ಅನಂತರಾಜ ಉಪಾಧ್ಯಾಯ, ಗಣೇಶ್ ಬ್ರಹ್ಮಾವರ ಮತ್ತು ಪಂಚಾಯತ್ ಮಾಜಿ ಅಧ್ಯಕ್ಷರಾದ ಉದಯ ಕುಲಾಲ್, ವಸಂತ ಆಚಾರ್ಯರ ಪುತ್ರ ಸಿದ್ಧಾರ್ಥ ಉಪಸ್ಥಿತರಿದ್ದರು.

error: Content is protected !!
Share This