ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಎಂ. ಎ. ಹೆಗಡೆ ಯವರು ಸಂಸ್ಕೃತ ವಿದ್ವಾಂಸರು. ಸಿದ್ದಾಪುರದ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಬಹುಕಾಲ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದವರು. ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿ, ವೇಷಧಾರಿ, ವಿಮರ್ಶಕ, ಸಂಘಟಕ, ಪ್ರಸಂಗಕರ್ತ, ನಿರ್ದೇಶಕ, ಸಮರ್ಥ ಸಂಪನ್ಮೂಲ ವ್ಯಕ್ತಿ. ಇಡಗುಂಜಿ ಮೇಳದಲ್ಲಿಯೂ ಪಾತ್ರ ಮಾಡಿದ್ದಾರೆ. ಅವರ ಅನೇಕ ಪ್ರಸಂಗಗಳು ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿವೆ. ಅವರ ವಿದ್ವತ್ ಪೂರ್ಣ ಬರಹಗಳು ನಾಡಿನ ವಿದ್ವಾಂಸರುಗಳ ಮನ್ನಣೆ ಪಡೆದಿವೆ. ಉತ್ತರ ಕನ್ನಡದ ಯಕ್ಷಗಾನ ಕವಿಗಳ ಹಾಗೂ ಅವರ ಕೃತಿಗಳ ಕುರಿತು ಪುಸ್ತಕ ಬರೆದಿದ್ದಾರೆ. ‘ಹಿಂದು ಸಂಸ್ಕಾರ’ ಗಳ ಕುರಿತು ಬರೆದ ಪುಸ್ತಕ ಪ್ರಸಿದ್ಧವಾಗಿದೆ.

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಮೇಲೆ ಅವರು ಹೊಸ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ. ಮಾತಿನ ಮಂಟಪ ನೂರು ಕಂತುಗಳಲ್ಲಿ ಹಾಗೂ ನಿವೃತ್ತ ಕಲಾವಿದರ ನೆನಪಿನ ಬುತ್ತಿಗಳು 50 ಕಂತಿನಲ್ಲಿ ಪ್ರಸಾರವಾಗಿವೆ. ಕರೋನ ಅವಧಿಯಲ್ಲಿ ಯಕ್ಷಪ್ರಿಯರ ಮೆಚ್ಚುಗೆಗೆ ಈ ಕಂತುಗಳು ಪಾತ್ರವಾಗಿವೆ. ಹಿರಿಯ ಕಲಾವಿದರನ್ನು ಗೌರವಿಸಿದ್ದಾರೆ. ಕಿರಿಯರ ಗುರುತಿಸಿ ಪ್ರೋತ್ಸಾಹಿಸಿದ್ದಾರೆ.

  • ಶ್ರೀ ಎಂ. ಎನ್. ಹೆಗಡೆ, ಹಲವಳ್ಳಿ, ಯಲ್ಲಾಪುರ
Share This