700-800 ವರುಷ ಇತಿಹಾಸವಿರುವ ಯಕ್ಷಗಾನದಲ್ಲಿ 5000ಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳಿವೆ ಎಂಬುದು ದಾಖಲಾಗುತ್ತದೆ. ಇಡಿ ಯಕ್ಷಗಾನಕ್ಕೆ ಪ್ರದರ್ಶನಗಳಿಗೆ ಪ್ರಸಂಗ ಸಾಹಿತ್ಯವೇ ಆಧಾರಸ್ಥಂಭ. ಅದನ್ನ ಹೊರತುಪಡಿಸಿ, ಯಕ್ಷಗಾನ ಪ್ರದರ್ಶನಗಳನ್ನು ಮಾಡಲು ಸಾಧ್ಯವಿಲ್ಲ. ಇಲ್ಲಿ ಅನೇಕ ಕವಿಗಳು ಯಾವ ಫಲಪೇಕ್ಷೇಗಳಿಲ್ಲದೇ, ಅನೇಕ ಪ್ರಸಂಗಳನ್ನು ರಚಿಸಿ ಯಕ್ಷಗಾನಕ್ಕೆ ನೀಡಿದ್ದಾರೆ. ಕೆಲವು ಪ್ರಸಂಗಗಳು ಮುದ್ರಣ ಭಾಗ್ಯವನ್ನು ಕಂಡರೆ, ಇನ್ನೂ ಕೆಲವು ಹಾಗೆ ಹಸ್ತಪ್ರತಿ ರೂಪದಲ್ಲೇ ಇದೆ. ಆದರೆ ಇಂದು ನಮ್ಮ ಅವಜ್ಞೆಯ ಪರಿಣಾಮದಿಂದಾಗಿ ಕೆಲವು ಅಮೂಲ್ಯ ಪ್ರಸಂಗಗಳು ನಾಶವಾಗಿರುವುದನ್ನ ಕಾಣಬಹುದು. ಇಡಿ ಯಕ್ಷಗಾನದ ಉಳಿವಿಗೆ ಆಧಾರವಾಗಿರುವ ಪ್ರಸಂಗಗಳನ್ನು ಮುಂದಿನ ತಲೆಮಾರಿಗೆ ಉಳಿಸಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷವಾಹಿನಿ ಸಂಸ್ಥೆ, ಪ್ರಸಂಗಗಳನ್ನು ಶಾಶ್ವತವಾಗಿಸುವುದಕ್ಕೆ ಯೋಜನೆಯನ್ನು ರೂಪಿಸಿ ಕಳೆದ ೩ ವರುಷಗಳಿಂದ ತನ್ನದೇಯಾದ ಕಾರ್ಯಚಟುವಟಿಕೆಯನ್ನು ಮಾಡುತ್ತಿದೆ. ಇವರ ಪ್ರಸಂಗ ಕೋಶ ಯೋಜನೆ ಹಾಗೂ ಪ್ರಸಂಗ ಪ್ರತಿ ಸಂಗ್ರಹದ ಯೋಜನೆಗಳು ಮುಕ್ತಜ್ಞಾನದ ಅವಕಾಶಗಳನ್ನು ಯಕ್ಷಗಾನ ವಲಯಕ್ಕೆ ನೀಡಿದ್ದಲ್ಲದೇ, ಪ್ರಸಂಗಗಳನ್ನು ಶಾಶ್ವತವಾಗಿ ಕಾಪಿಡುವ ಯೋಜನೆಗಳಿವೆ. ಅ೦ತರ್ಜಾಲ ಸ೦ಪನ್ಮೂಲಗಳ ಮೂಲಕ ಯಕ್ಷಗಾನದ ಉಳಿವು ಬೆಳೆವಿನತ್ತ ಅಮೂಲಾಗ್ರ ದಾಖಲಾತಿಗಳನ್ನು ಉಚಿತ ಪ್ರಸಾರಕ್ಕಾಗಿ ಮುಖ್ಯವಾಗಿ ಸ್ವಯಂಸೇವೆಯ ಬಲದಲ್ಲಿ ಸೇರಿಸುತ್ತಾ ಹೋಗಲು ಮುಡಿಪಾದ ಸಂಸ್ಥೆ ಹಾಗೂ ಅದರ ಹಿಂದಿನ ಅರ್ಪಣೆಯ ಮನೋಭಾವದಲ್ಲಿ ದುಡಿಯುತ್ತಿರುವ ಅನೇಕ ಯಕ್ಷಪ್ರೇಮಿಗಳ ಸಮೂಹವಾಗಿದೆ
ಪ್ರಸಂಗ ಕೋಶ ಯೋಜನೆ
ಈ ಯೊಜನೆಯಲ್ಲಿ ಯಕ್ಷಗಾನ ಪ್ರಸಂಗಗಳನ್ನು ಡಿಜಿಟಲಿಕರಣ ಮಾಡಿ, ಅದನ್ನ ಪಿಡಿಪ್ ಬಗೆಯಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸಿ ಸರ್ವರಿಗೂ ತಲುಪುವಂತೆ ಇದರ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಮೂಲ ಪ್ರತಿಗಳಲ್ಲಿದ್ದ ಕೆಲವು ಮುದ್ರಣ ದೋಷಗಳನ್ನು, ವ್ಯಾಕರಣ ದೋಷಗಳು ಇತ್ಯಾದಿಗಳುನ್ನು ಮತ್ತೆ ಸರಿಪಡಿಸಿ ಶುದ್ದವಾದ ಪ್ರತಿಗಳನ್ನು ನೀಡುವುದು ಸಹ ಇದರ ಮತ್ತೊಂದು ಉದ್ದೇಶವಾಗಿದೆ. ಇಲ್ಲಿಯವರೆಗೆ 175ಕ್ಕೂ ಅಧಿಕ ಪ್ರಸಂಗಗಳು ಅಂತರ್ಜಾಲದಲ್ಲಿ ಪ್ರಕಟಿಸಿದ್ದು , ಆಸಕ್ತರು ತಮಗೆ ಬೇಕಾದ ಪ್ರತಿಗಳನ್ನು, ಅದನ್ನು ಮುದ್ರಿಸಿಕೊಳ್ಳುವುದಕ್ಕೋ ಅಥವಾ ತಮ್ಮ ಮೊಬೈಲ್/ಕಂಪ್ಯೂಟರ್ ನಲ್ಲಿ ಶೇಖರಿಸಿಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ಯೊಜನಾಧ್ಯಕ್ಷರಾಗಿ ರವಿ ಮಡೋಡಿ, ಸಂಪಾದಕರಾಗಿ ಶ್ರೀಧರ್ ಡಿ.ಎಸ್ ಹಾಗೂ ಉಪ ಸಂಪಾದಕರಗಿ ಗಿಂಡಿಮನೆ ಮೃತ್ಯುಂಜಯರವರು ಕಾರ್ಯನಿರ್ವಹಿಸುತ್ತಿದ್ದು ಜೊತೆಗೆ 30ಕ್ಕೂ ಅಧಿಕ ಸ್ವಯಂಸೇವಕರು ಯಾವುದೋ ಫಲಪೇಕ್ಷೆವಿಲ್ಲದೇ ತಮ್ಮ ಯಕ್ಷ ಕೈಂಕರ್ಯದಲ್ಲಿ ತೋಡಗಿದ್ದಾರೆ. ಯಕ್ಷಪ್ರಸಂಗಕೋಶ ಯೋಜನೆಯ ಮೂಲಕ 175ಕ್ಕೂ ಮಿಕ್ಕಿದ ಯಕ್ಷ ಪ್ರಸಂಗಗಳು ಉಚಿತ ಅಂತರ್ಜಾಲ ಪ್ರಕಾಶನದಲ್ಲಿ ಪಡೆಯುವುದಕ್ಕೆ ಕೆಳಗಿನ ಕೊಂಡಿಯನ್ನು ಬಳಸಿ ಪಡೆಯಬಹುದಾಗಿದೆ
https://drive.google.com/file/d/0ByoSUfOf85mCSXA0Rm1NQTRiY28
ಪ್ರಸಂಗ ಪ್ರತಿ ಸಂಗ್ರಹ ಯೋಜನೆ
ಈ ಯೋಜನೆಯಲ್ಲಿ ಈಗ ಮುದ್ರಿತ ಪ್ರಸಂಗಗಳನ್ನು ಸ್ಕಾನ್ ಮಾಡಿ ಅದನ್ನ ಅಂತರ್ಜಾಲದಲ್ಲಿ ಪ್ರಕಟಿಸುವುದು ಇಲ್ಲಿಯ ಧ್ಯೇಯೋದ್ದೇಶ. ಈಗಾಗಲೇ 1000ಕ್ಕೂ ಅಧಿಕ ಸ್ಕ್ಯಾನ್ ಪ್ರತಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಈ ಯೋಜನೆಯಲ್ಲಿ ನಟರಾಜ ಉಪಾಧ್ಯ ಪ್ರಧಾನ ಸಂಪಾದಕರಾಗಿ ಹಾಗೂ ಅಶ್ವಿನಿ ಹೊದಲ ಯೋಜನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
https://drive.google.com/file/d/1W8dZG9xmlAAn7TwsyTWUFIMTa-hdw4kW
ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಕೋಶ ಇವೆರೆಡನ್ನೂ ಒಂದೇ ಕಡೆ ಅಳವಡಿಸಿಕೊಂಡಿರುವ ಆಂಡ್ರೋಯ್ಡ್ ಆಪ್ ನ ಕೊಂಡಿ :
https://play.google.com/store/apps/details?id=prasanga.prati.sangraha