ದುಬೈಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಟ್ರಸ್ಟ್‌ನ ಮನೆ ನಿರ್ಮಾಣದ ‘ಯಕ್ಷಾಶ್ರಮ’ ಯೋಜನೆಗೆ ಚಿತ್ರನಟ ಪುನೀತ್ ರಾಜ್‌ಕುಮಾರ್ ₹5 ಲಕ್ಷ ನೀಡಿದರು

ಯಕ್ಷಧ್ರುವ ಪಟ್ಲ ಟ್ರಸ್ಟ್‌ನ ಮನೆ ನಿರ್ಮಾಣದ ‘ಯಕ್ಷಾಶ್ರಮ’ ಯೋಜನೆಗೆ ಚಿತ್ರನಟ ಪುನೀತ್ ರಾಜ್‌ಕುಮಾರ್ ₹5 ಲಕ್ಷ ನೀಡಿದರು.

ಯಕ್ಷಧ್ರುವ ಪಟ್ಲ ಟ್ರಸ್ಟ್ ದುಬೈ ಘಟಕ ಮತ್ತು ದುಬೈ ಯಕ್ಷಗಾನ ಅಭ್ಯಾಸ ತರಗತಿ ಆಶ್ರಯದಲ್ಲಿ ದುಬೈಯ ಕರಾಮದ ಶೇಖ್ ರಶೀದ್ ಆಡಿಟೋರಿಯಂನಲ್ಲಿ ನಡೆದ ‘ಪಟ್ಲ 2019 ಸಂಭ್ರಮ’ದಲ್ಲಿ ಚಿತ್ರನಟ ಪುನೀತ್ ಪಾಲ್ಗೊಂಡಿದ್ದು, ಟ್ರಸ್ಟ್‌ ಸ್ಥಾಪಕಾಧ್ಯಕ್ಷ, ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರಿಗೆ ₹ 5 ಲಕ್ಷ ಮೊತ್ತದ ಚೆಕ್‌ ಹಸ್ತಾಂತರಿಸಿದರು. 

‘ಕಲಾವಿದರ ಬದುಕಿಗೆ ಆಸರೆ ನೀಡುವ ಕೆಲಸವನ್ನು ಟ್ರಸ್ಟ್ ಶಾಶ್ವತವಾಗಿ ಮಾಡಲಿ’ ಎಂದು ಹಾರೈಸಿದರು. ದುಬೈ ಘಟಕದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿ, ಚಲನಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ಪ್ರಮುಖರಾದ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಸುಜಾತ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಅನಂತ ಶೆಣೈ, ಗುಣಶೀಲ ಶೆಟ್ಟಿ, ಹರೀಶ್ ಬಂಗೇರ, ವಾಸುದೇವ ಭಟ್ ಪುತ್ತಿಗೆ, ರಘುರಾಮ ಶೆಟ್ಟಿ ಪುತ್ತಿಗೆ, ರಘುರಾಮ ಶೆಟ್ಟಿ ಅಜಮಾನ್, ಪಟ್ಲ ಟ್ರಸ್ಟ್ ದುಬೈ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುದಾಬಿ ಮತ್ತು ಕೋಶಾಧಿಕಾರಿ ಹಾಗೂ ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರಿಯ ಹರೀಶ್ ಶೆಟ್ಟಿ, ವಿಠಲ ಶೆಟ್ಟಿ, ರಾಜೇಶ್ ಕುತ್ತಾರು ಇದ್ದರು. 

ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ‘ಕಲಾವಿದರ ಏಳಿಗೆಗಾಗಿ ಹುಟ್ಟಿಕೊಂಡ ಪಟ್ಲ ಫೌಂಡೇಶನ್ ಟ್ರಸ್ಟ್‌ಗೆ ದಾನಿಗಳು ನೀಡುತ್ತಿರುವ ನೆರವಿನಿಂದ ಕಲಾವಿದರ ಬದುಕು ಹಸನಾಗುತ್ತಿದೆ’‍ ಎಂದರು. 

ಕರುಣಾಕರ ಶೆಟ್ಟಿಗಾರ್ ಕಾಶೀಪಟ್ಣ, ಡಾ. ಪ್ರಖ್ಯಾತ್ ಶೆಟ್ಟಿ, ಪದ್ಮನಾಭ ಉಪಾಧ್ಯಾಯ, ದಯಾನಂದ ಶೆಟ್ಟಿಗಾರ್ ಮಿಜಾರು, ಚಲನಚಿತ್ರ ನಟ ಅರವಿಂದ ಬೋಳಾರ್, ದಿನೇಶ್ ಶೆಟ್ಟಿಗಾರ್ ಕೋಡಪದವು, ಕರುಣಾಕರ ಶೆಟ್ಟಿಗಾರ್, ಕಾಶೀಪಟ್ಣರ ಇದ್ದರು. 

ದೇಣಿಗೆ: ಯಕ್ಷಧ್ರುವ ಪಟ್ಲ ಟ್ರಸ್ಟ್‌ನ ದುಬೈ ಘಟಕವು ದುಬೈಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಟ್ರಸ್ಟ್‌ಗೆ ₹17 ಲಕ್ಷ ದೇಣಿಗೆಯನ್ನು ದುಬೈ ಘಟಕವು ಘೋಷಿಸಿತು

error: Content is protected !!
Share This