ನೂತನ ಮನೆಯ ಕೀಲಿಕೈ ಹಸ್ತಾಂತರ

ಹನುಮಗಿರಿಮೇಳದ ಕಲಾವಿದ ಶ್ರೀ ರೂಪೇಶ್ ಆಚಾರ್ಯ ಇವರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿಯಲ್ಲಿ ವಿಟ್ಲ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ದೇವಸ್ಥಾನದ ಹತ್ತಿರದಲ್ಲಿ ನಿರ್ಮಾಣಗೊಂಡಿರುವ “ಶ್ರೀದೇವಿ ನಿಲಯ” ನೂತನ ಮನೆಯ ಕೀಲಿಕೈ ಹಸ್ತಾಂತರವು ಇಂದು ಬೆಳಿಗ್ಗೆ ಸಂಪನ್ನಗೊಂಡಿತು.

ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರು ಹಾಗೂ ನೂತನಮನೆಯ ನಿರ್ಮಾಣಕ್ಕೆ ಕಾರಣೀಕರ್ತರಾದ ದಾನಿ ಶ್ರೀ ಅಶೋಕ್ ಶೆಟ್ಟಿ ಬೆಳ್ಳಾಡಿಯವರು ಭಾಗವಹಿಸಿ ಶುಭಹಾರೈಸಿದರು.

ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪೂವಪ್ಪ ಶೆಟ್ಟಿ ಅಳಿಕೆ ಹಾಗೂ ಪದಾಧಿಕಾರಿಗಳಾದ ಶ್ರೀ ಅರವಿಂದ ರೈ ಮೂರ್ಜೆಬೆಟ್ಟು ಹಾಗೂ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಉಪಸ್ಥಿತರಿದ್ದರು.

ಮನೆಯವರ ವತಿಯಿಂದ ನಿರ್ಮಾತೃ ಶ್ರೀ ಅಶೋಕ್ ಶೆಟ್ಟಿ ಬೆಳ್ಳಾಡಿಯವರಿಗೆ ಹಾಗೂ ವಿಟ್ಲ ಘಟಕದ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಗೌರವ ಸಮರ್ಪಿಸಿದರು.

ನಂತರ ಯಕ್ಷಧ್ರುವ ಪಟ್ಲ ಫೌಂಡೇಶನ್ ಕೇಂದ್ರೀಯ ಘಟಕದ ವತಿಯಿಂದ ರೂಪೇಶ್ ಆಚಾರ್ಯ ಅವರ ಮನೆಯವರನ್ನು ಗೌರವಿಸಲಾಯಿತು.

ಬಡವರ ಕಣ್ಣೀರೊರಸಲು ಹೃದಯಪೂರ್ವಕ ಸಹಕರಿಸಿದ ಶ್ರೀ ಅಶೋಕ್ ಶೆಟ್ಟಿ ಬೆಳ್ಳಾಡಿ ಹಾಗೂ ಶ್ಯಾಮಲಾ ಅಶೋಕ್ ಶೆಟ್ಟಿ ಯವರಿಗೆ ಯಕ್ಷಧ್ರುವ ಪಟ್ಲ ಫೌಂಢೇಶನ್ ಟ್ರಸ್ಟ್ ನ ಸಮಸ್ತ ಪದಾಧಿಕಾರಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು

error: Content is protected !!
Share This