ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಉಭಯ ತಿಟ್ಟುಗಳ ಕಲಾವಿದರ ಸಹಕಾರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದೊಂದಿಗೆ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ “ಯಕ್ಷಾವತರಣ’ಕ್ಕೆ ಬುಧವಾರ ಲ್ಯಾಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದಲ್ಲಿ ಚಾಲನೆ ನೀಡಲಾಯಿತು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಯಶೋವರ್ಮ ಉದ್ಘಾಟಿಸಿ ಮಾತನಾಡಿ, ದೇವಸ್ಥಾನ ತೆರೆಯದಿದ್ದಾಗ ಭಗವಂತನ ಸಾನ್ನಿಧ್ಯದಲ್ಲಿ ಭಕ್ತರು ಭಕ್ತಿಯನ್ನು ಸಮರ್ಪಿಸಲಾಗದೆ ಗೊಂದಲದಲ್ಲಿದ್ದಂತೆ ಕಲಾರಸಿಕರಲ್ಲೂ ದುಗುಡಗಳಿದ್ದವು.

ಈ ಕಾರ್ಯಕ್ರಮದ ಮೂಲಕ ಸಂಘಟಕರು ಕಲಾರಾಧಕರ ತುಮುಲವನ್ನು ದೂರಮಾಡಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ತಂತ್ರಜ್ಞಾನದ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ ಎಂದವರು ತಿಳಿಸಿದರು.

ಪ್ರಥಮ ದಿನ ಅತಿಕಾಯ ಮೋಕ್ಷ ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ಪದ್ಯಾಣ ಶಂಕರನಾರಾಯಣ ಭಟ್, ಪದ್ಮನಾಭ ಉಪಾಧ್ಯಾಯ, ಮುಮ್ಮೇಳದಲ್ಲಿ ಡಾ| ಎಂ. ಪ್ರಭಾಕರ ಜೋಶಿ, ಜಬ್ಬಾರ್‌ ಸಮೋ ಸಂಪಾಜೆ, ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ವಾದಿರಾಜ ಕಲ್ಲೂರಾಯ ಭಾಗವಹಿಸಿದ್ದರು.

ಮುಖರಾದ ಸುಬ್ರಾಯ ಶೆಣೈ, ಪ್ರತಾಪಸಿಂಹ ನಾಯಕ್, ಜಯರಾಮ್, ಬಿ.ಕೆ. ಧನಂಜಯರಾವ್, ಶ್ರೀಧರ ಕೆ.ವಿ., ದಿನೇಶ್ ಕುಮಾರ್ ಉಪಸ್ಥಿತರಿದ್ದರು.

ಕುರಿಯ ಪ್ರತಿಷ್ಠಾನದ ಸಂಚಾಲಕ ಅಶೋಕ್ ಭಟ್ ಪ್ರಸ್ತಾವಿಸಿದರು. ಕಲಾವಿದ ವಾದಿರಾಜ ಕಲ್ಲೂರಾಯ ವಂದಿಸಿದರು.

error: Content is protected !!
Share This