‘ಜೀವನದ ಜಂಜಾಟದ ನಡುವೆ ನಮಗೆ ನೆಮ್ಮದಿ ನೀಡುವ ಶಕ್ತಿ ಇರುವುದು ಕಲೆಗೆ ಮಾತ್ರ. ಯಕ್ಷಗಾನ, ನಾಟಕ, ನೃತ್ಯ – ಸಂಗೀತಗಳ ಮೂಲಕ ಮನಸ್ಸು – ಬುದ್ಧಿಗಳು ಜಾಗೃತಗೊಳ್ಳುತ್ತವೆ. ಅದಕ್ಕೆ ಕಾರಣರಾದ ಕಲಾವಿದರನ್ನು ನಾವು ಮರೆಯಬಾರದು. ಕಲೆಗಾಗಿ ಬದುಕಿದವರು ಸದಾ ಸ್ಮರಣೀಯರು. ಯಕ್ಷಾಂಗಣವು ಸಪ್ತಾಹದ ಎಲ್ಲಾ ದಿನಗಳಲ್ಲೂ ಒಬ್ಬೊಬ್ಬ ಕಲಾ ಸಾಧಕರನ್ನು ನೆನಪಿಸುತ್ತಿರುವುದು ನಿಜವಾದ ಕಲರಾಧನೆಯಾಗಿದೆ’ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ.ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿ (ರಿ.) ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2023’ ಹನ್ನೊಂದನೇ ವರ್ಷದ ನುಡಿ ಹಬ್ಬ ಪ್ರಯುಕ್ತ ನವೆಂಬರ್ 24ರಂದು ಏರ್ಪಡಿಸಿದ್ದ ವಿದ್ವಾನ್ ಕೆ.ಕಾಂತ ರೈ ಮೂಡಬಿದ್ರೆ ಅವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಸಂಸ್ಮಣ ಜ್ಯೋತಿ ಬೆಳಗಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ವಿದ್ವಾನ್ ಕಾಂತ ರೈಯವರ ಬದುಕು ಮತ್ತು ಸಾಧನೆಗಳನ್ನು ಸ್ಮರಿಸಿದರು.’ಅವಿಭಜಿತ ಜಿಲ್ಲೆಯ ಯಕ್ಷಗಾನ, ಸಾಹಿತ್ಯ ಮತ್ತು ಕೃಷಿ ಕ್ಷೇತ್ರದಲ್ಲಿನ ಸಾಧಕರಲ್ಲಿ ಕಾಂತ ರೈ ಅಗ್ರಗಣ್ಯರು’ ಎಂದರು.

ಸಹಕಾರ ರತ್ನ ಸುರೇಶ್ ರೈ ಸನ್ಮಾನ:

ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಲ| ಎ. ಸುರೇಶ್ ರೈ ಅವರಿಗೆ ಕರ್ನಾಟಕ ಸರಕಾರದಿಂದ ಈ ಬಾರಿ ಲಭಿಸಿದ ಸಹಕಾರ ರತ್ನ ಪ್ರಶಸ್ತಿಗಾಗಿ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಲ|ದೇವದಾಸ ಭಂಡಾರಿ, ನಗರದ ಬ್ರಿಲಿಯಂಟ್ ಕಾಲೇಜು ಸಂಚಾಲಕ ಸಿಎ ರಾಮಮೋಹನ ರೈ, ಉದ್ಯಮಿ ಶ್ರೀನಾಥ ಕೊಂಡೆ, ಹವ್ಯಾಸಿ ಯಕ್ಷಗಾನ ಕಲಾವಿದ ಕೆ‌.ಜಯರಾಮ ಸಾಂತ ಅತಿಥಿಗಳಾಗಿದ್ದರು.

ಯಕ್ಷಾಂಗಣದ ಉಪಾಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಮಹಿಳಾ ಪ್ರತಿನಿಧಿ ನಿವೇದಿತಾ ಎನ್. ಶೆಟ್ಟಿ ಬೆಳ್ಳಿಪ್ಪಾಡಿ ವಂದಿಸಿರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ; ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಸುಧಾಕರ ರಾವ್ ಪೇಜಾವರ್, ಲಕ್ಷ್ಮೀನಾರಾಯಣ ರೈ ಹರೇಕಳ, ಉಮೇಶ ಆಚಾರ್ಯ ಗೇರುಕಟ್ಟೆ, ಸಿದ್ದಾರ್ಥ ಆಜ್ರಿ, ಶರತ್ ಕುಮಾರ್ ಕದ್ರಿ, ಸುಮಾಪ್ರಸಾದ್ ಉಪಸ್ಥಿತರಿದ್ದರು.

‘ಚಂದ್ರಹಾಸ ಚರಿತ್ರೆ’ ತಾಳಮದ್ದಳೆ:

‘ ಶ್ರೀಹರಿ ಚರಿತ್ರೆ’ ಏಕಾದಶ ಸರಣಿಯಲ್ಲಿ 6 ನೇ ದಿನ ‘ಚಂದ್ರಹಾಸ ಚರಿತ್ರೆ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು. ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಹಾಗೂ ಹಿರಿಯ ಕಲಾವಿದರು ಹಿಮ್ಮೇಳ – ಮುಮ್ಮೇಳಗಳಲ್ಲಿ ಪಾಲ್ಗೊಂಡರು.

error: Content is protected !!
Share This