ಶ್ರೀ ವಾಸುದೇವ ಮರಾಠೆ ಮಾಳ ಇವರ 75ರ ಸಂಭ್ರಮ

ಯಕ್ಷಗಾನ ಭಾಗವತ, ಶ್ರೀ ವಾಸುದೇವ ಮರಾಠೆ ಮಾಳ ಇವರ 75ರ ಸಂಭ್ರಮ ಇತ್ತೀಚೆಗೆ ಮಾಳ ಹಲ್ಲಂತಡ್ಕದ ಸ್ವಗೃಹದಲ್ಲಿ ಇತ್ತೀಚೆಗೆ ನಡೆಯಿತು ಶ್ರೀ ಹರಿಹರ ಗೋರೆ ಶ್ರೀ ಬಾಬುರಾವ್ ಮಾಳ ಇವರ ಮಾರ್ಗದರ್ಶನದಲ್ಲಿ ಬಡಗುತಿಟ್ಟು ಯಕ್ಷಗಾನ ಭಾಗವತರಾದ ರೂಪುಗೊಂಡು ಶ್ರೀ ಪ್ರಭಾಕರ ಗೋರೆ ಇವರ ಮಾರ್ಗದರ್ಶನದಲ್ಲಿ ತೆಂಕುತಿಟ್ಟಿನ ಭಾಗವತಿಕೆಯನ್ನು ಅಭ್ಯಾಸ ಮಾಡಿ ಸುಮಾರು 40 ವರ್ಷಗಳಿಂದ ಭಾಗವತ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಕಾರ್ಕಳದ ಮಹಾಮಾಯಿ ಯಕ್ಷಗಾನ ಸಂಘದಲ್ಲಿ ಸುಮಾರು 10 ವರ್ಷ ಆಕಾಶವಾಣಿಯಲ್ಲಿ ಯಕ್ಷಗಾನ ಕಾರ್ಯಕ್ರಮ ನೀಡಿದ್ದು ಶಾಸ್ತ್ರೀಯ ಸಂಗೀತದಲ್ಲಿಯೂ ಹಾರ್ಮೋನಿಯಂ ವಾದನದಲ್ಲಿಯೂ ಪರಿಣತಿಯನ್ನು ಪಡೆದಿದ್ದಾರೆ. ದಿನಾಂಕ 12-05-22 ರಂದು ನಡೆದ ಈ 75ರ ಸಂಭ್ರಮ ಕಾರ್ಯಕ್ರಮದಲ್ಲಿ ಶ್ರೀ ಪ್ರಭಾಕರ ಜೋಷಿ ಅವರ ಸಂಯೋಜನೆಯಲ್ಲಿ ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಲೆ ನಡೆಯಿತು ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ವಾಸುದೇವ ಮರಾಠೆ, ಶ್ರೀಮತಿ ಶಾಲಿನಿ ಜಯಪ್ರಕಾಶ್ ಹೆಬ್ಬಾರ್, ಮದ್ದಳೆಯಲ್ಲಿ ಶ್ರೀ ಆನಂದ ಗುಡಿಗಾರ್ ಚಂಡೆಯಲ್ಲಿ ಶ್ರೀ ವರುಣ್ ಹೆಬ್ಬಾರ್ ಸಹಕರಿಸಿದರು ಅರ್ಥಧಾರಿಗಳಾಗಿ ಪ್ರಸಿದ್ಧ ಅರ್ಥಧಾರಿಗಳಾದ ಡಾ ಪ್ರಭಾಕರ ಜೋಶಿ, ಶ್ರೀ ಉಜಿರೆ ಅಶೋಕ್ ಭಟ್ ಶ್ರೀ ವೀರೇಶ್ವರ ಸಹಸ್ರಬುದ್ಧೆ ಭಾಗವಹಿಸಿದರು. ನಂತರ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ವಿವಿಧ ಭಕ್ತಿಭಾವ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

error: Content is protected !!
Share This