ಅದು 2018. ನುಡಿಸಿರಿಯಲ್ಲಿ ನನಗೆ ಪ್ರಶಸ್ತಿಯ ಹೊಣೆ. ಪ್ರಶಸ್ತಿಗೆ ಆಯ್ಜೆಯಾಗಿದ್ದ ಅರುವದವರ ಬಯೊಡಾಟದೊಂದಿಗೆ ಅವರ ಮಗ ದೇವಿ ಪ್ರಸಾದರು ಕಚೇರಿಗೆ ಬಂದಿದ್ದರು. ಅವರಲ್ಲಿ ಅರುವದವರ ಪಾತ್ರವನ್ನು ನಾನು ಬಾಲ್ಯದಲ್ಲಿ ಬೆರಗಿನಿಂದ ಕಂಡ ದಿನಗಳನ್ನು ನೆನಪಿಸಿದ್ದೆ. ಅವರದ್ದೊಂದು ಕೃತಿ ಅವಶ್ಯಕ ಬರಲೇ ಬೇಕು ಅಂದೆ. ದೇವಿಪ್ರಸಾದರು ಅದನ್ನೆ ಗಟ್ಟಿ ಮಾಡಿದರು. ಅರುವ ಪ್ರತಿಷ್ಟಾನದ ವಾರ್ಷಿಕೋತ್ಸವದಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಅಧ್ಯಕ್ಷತೆ ಡಾ. ಆಳ್ವರದ್ದು. ಅದನ್ನು ಪ್ರಕಟಿಸುವ ಹೊಣೆ ಯನ್ನು ಪ್ರಕಟಿಸಿದರು. ಸಹಜವಾಗಿ ನನ್ನ ಜವಾಬ್ದಾರಿ ಹೆಚ್ಚಿತು. ಸಂಪಾದಕ ಮಂಡಳಿ ರಚಿಸಿ ಡಾ. ಆಳ್ವರ ಅತಿಥಿ ಗೃಹದಲ್ಲಿ ದೀರ್ಘ ಚರ್ಚೆಯೂ ಆಯಿತು. ಲೇಖಕರಿಗೆ ಪತ್ರ ಬರೆದಾಯಿತು. ಅರುವದವರ ಮನೆಗೂ ಭೇಟಿ ನೀಡಿ ವಿಚಾರ ವಿನಿಮಯ ಮಾಡಿಕೊಂಡೆವು. ಒಂದೆರಡು ಬಾರಿ ಅವರು ವಿದ್ಯಾಗಿರಿಗೂ ಬಂದರು. ಆದರೆ ಪುಸ್ತಕದ ಕೆಲಸ ಮಂದಗತಿಯಲ್ಲೆ ಸಾಗಿತು. ಅಷ್ಡರಲ್ಲಿಕೊರೋನ ಬಂತು. ವಾಸ್ತವಿಕವಾಗಿ ಪುಸ್ತಕಕ್ಕೆ ಇದು ಸಕಾಲ. ಆದರೂ ಕೊರೋನಾ ಅಂತರ ಕಾಪಾಡುವುದರಲ್ಲೆ ಸಮಯ ಕಳೆಯಿತು. ಇನ್ನೇನು ಪುಸ್ತಕ ಮಾಡಿ ಮುಗಿಸಲೆ ಬೇಕೆಂಬ ಹಠದಲ್ಲಿ ಕಲಾವಿದರ ನೆಲೆ ಹುಡುಕಿ ನೋಡಿವಿಷಯ ಸಂಗ್ರಹಿಸಿ ಲೇಖನ ರೂಪಕ್ಕೆ ತಂದು ಟೈಪಿಸಿ ರೆಡಿ ಮಾಡಿ ಆಯಿತು. ಈ ನೆಪದಲ್ಲಿ ಜಪ್ಪು, ಕುಂಬ್ಳೆ, ಬಾಯಾರು, ಮೊದಲಾದ ಹಿರಿಯರೊಂದಿಗೆ ಮಾತಾಡಿದ ಸಾರ್ಥಕತೆ. ಪುಸ್ತಕದ ಕೆಲಸ ವಿಳಂಬ ಆಗುತ್ತಿರುವ ಚಿಂತೆ ಕಾಡುತ್ತಿತ್ತು. ‌ಕಾಲೇಜು ಪಾಠ, ಪರೀಕ್ಷೆ, ಸಂಸಾರ ಸಾಗದಲ್ಲಿ ಪುಸ್ತಕ ದ ಕೆಲಸ ಆಮೆಗತಿಯಲ್ಲಿ ಸಾಗಿತು.ಲೇಖನ ಬರೆದ ಲೇಖಕರು ಪುಸ್ತಕ ಆಯಿತಾ ಎಂದು ಕೇಳುವಾಗ ಚುಚ್ಚಿದಂತೆ ಆಗುತ್ತಿತ್ತು. ಅದು ಇನ್ನೂ ಆಗಲಿಲ್ಲವ. ಎಂದಾಗಂತೂ ನನ್ನ. ಈ ನಿಧಾನ ಅತಿಯಾಯಿತು. ಪುಸ್ತಕ ಪೂರ್ಣ ಮಾಡುವ ಸಂಕಲ್ಪ ಮಾಡಿ ನನಗೆ ನಾನೆ ಎಚ್ಚರಿಸಿದೆ. ಲೇಖನ ಕೊಡದೆ ಇರುವರಲ್ಲಿ ಪೋನಾಲ್ಲಾದರೂ ಹೇಳಿ ಬಿಡಿ ಲೇಖನ ಮಾಡಿ ಬಿಡುವೆ ಅಂದೆ. ಕೆಲವರು ಪರಿ ಪರಿಯ ಪೀಡನೆ ತಾಳಲಾರದೆ ಲೇಖನ ಒದಗಿಸಿದರು. ಪ್ರಾರಂಭದಲ್ಲೆ ಲೇಖನ ಕೊಟ್ಟವರಿಗೆ ಪುಸ್ತಕದ ಕಾರ್ಯ ಪ್ರಗತಿಯಲ್ಲಿದೆ ಅಂದೆ. ಈ ಮಧ್ಯೆ ಆಟ ಮನೆಗೆ ಬರುತ್ತಿದ್ದಾಗ ಅರುವದವರಿಗೆ ಆ್ಯಕ್ಸಿಡೆಂಟ್ ಆಗಿದೆ ಎಂಬ ಸುದ್ದಿ‌ ಬಂತು. ಆಳ್ವಾಸ್ ನಲ್ಲೆ ದಾಖಲಾಗಿದ್ದರು‌ . ಪುಸ್ತಕ‌‌ ಈ ಮೊದಲೆ ಮುಗಿಸಬೇಕಿತ್ತು‌ . ಆಗಲಿಲ್ಲ. ಕಲಾವಿದ ಅರುವ , ಪ್ರಕಟಿಸುವ ಘೋಷಣೆ ಮಾಡಿದ್ದ ಡಾ. ಆಳ್ವರು ಕಣ್ಣೆದುರು ಬಂದಂತಾಯಿತು. ಕೃತಿ ಆಕೃತಿ ಸೇರಿತು‌ . ಒಳ್ಳೆಯ ಪೋಟೋಗಳಿಲ್ಲ! ಏನು ಮಾಡೋಣ. ಮನೋಹರ್ ಕುಂದರ್ ಮನೆಗೆ ಹೋಗಿ ಹುಡುಕಾಡಿ ಕೆಲವು ಪೋಟೋಗನ್ನು ಪಡೆದಾಯಿತು. ಆದರೂ ಸಾಲದು. ಮತ್ತೇನು ಮಾಡೋಣ. ಹಿರಿಯಡ್ಕ ಮೇಳದಲ್ಲಿ ಅರುವ ಇದ್ದಾರೆ. ಉದಯವಾಣಿ ಪೇಪರ್ ನೋಡಿ ಇಂದಿನ ಆಟ ಎಲ್ಲಿ ಎಂದು ಗುರುತಿಸಿದೆ. ಅಲ್ಲೆ ಇರುವ ಸ್ಥಳೀಯ ಪೋಟೋಗ್ರಾಫರ್ ಜೊತೆ ಸೇರಿಸಿ ಒಂದಿಷ್ಟು ಚಿತ್ರ ಸಂಪಾದನೆಯೂ ಆಯಿತು. ಇನ್ನೇನಿದ್ದರೂ ಆಕೃತಿಯ ಕೆಲಸ ಎಂಬ ನಿಟ್ಡುಸಿರು. ಒಂದೆರಡು ಬಾರಿ ಆಕೃತಿಗೆ ಓಡಾಡುತ್ತಲೆ ರಂಗಸ್ಥಳದ ರಾಜ – ಅರುವ. ಎಂಬ ಕೃತಿ ಕನಸಿಗೆ ಕಲ್ಲೂರು ನಾಗೇಶರು ಆಕೃತಿ ಕೊಟ್ಟಿದ್ದರು. ಇಂದು ಜುಲೈ 4 ಡಾ. ಜೋಶಿಯವರರು ಡಾ. ಆಳ್ವರ ಅಧ್ಯಕ್ಷತೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. . ಅರುವ ದಂಪತಿಗಳಿಗೆ ಸನ್ನಾನವೂ ಆಗಿದೆ. ಒಳ್ಳೆಯ ಸಭೆಯೂ ಸೇರಿದೆ. ಸರ್ವರ ಸಹಕಾರ ಮತ್ತು ಸಲಹೆಯಲ್ಲಿ ಇದು ಸಾಧ್ಯವಾಗಿದೆ. ಕೃತಿ ಬಿಡುಗಡ ನನಗೂ ಬಿಡುಗಡೆ ದೊರೆತಂತಾಗಿದೆ. 1000 ಪ್ರತಿಗಳ ಮುದ್ರಣವಾಗಿದೆ. 400 ರ ಪುಸ್ತಕವನ್ನು ಅದರ ವೆಚ್ಚದ ಬೆಲೆ 200 ಕ್ಕೆ ಆಸಕ್ತರಿಗೆ ಕೊಡುವಂತೆ ಅಧ್ಯಕ್ಷರು ಸೂಚಿಸಿದ್ದಾರೆ. ಹಲವೆಡೆ ಕೃತಿ ಅವಲೋಕ ಆಯೋಜಿಸಿ ಓದುಗರಿಗೆ ತಲುಪುವಂತೆ ಮಾಡಿ ಅಂದಿದ್ದಾರೆ. ಬಂದ ಹಣ ಅರುವ ಪ್ರತಿಷ್ಠಾನ ದ ಸಮಾಜಮುಖಿ ಕಾರ್ಯಗಳಿಗಾಗಿ ನೀಡೋಣ ಅಂದಿದ್ದಾರೆ. ಇದಕ್ಕಿಂತ ಸಂತೋಷ ಮತ್ತೇನಿದೆ. ಅರುವ ಕೃತಿ ರಚನೆಯ ಕೆಲಸ ನನಗೆ ಕೆಲಸ ಮಾಡಲು ಬಲ ಬಂದಿದೆ. ನನ್ನ ಬಗ್ಗೆ ನನಗೆ ವಿಶ್ವಾಸ ಹೆಚ್ಚಿಸಿದೆ.

( ಯೋಗೀಶ ‌ಕೈರೋಡಿ)

error: Content is protected !!
Share This