ಗುರುದೇವ ರವೀಂದ್ರನಾಥ ಠಾಕೂರರ ಪ್ರಬಂಧಗಳು, ಭಾಷಣಗಳು

ಅನುವಾದ : ಬಿ. ರಮಾನಾಥ ಭಟ್

ಜಿ. ರಾಮನಾಥ ಭಟ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು ; ೧೯೮೪ರಿಂದ ಮೈಸೂರಿನಲ್ಲಿ ವಾಸ. 1959ರಲ್ಲಿ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ ಪಡೆದಮೇಲೆ ಸುಮಾರು ಮೂರು ವರ್ಷ ಮಹಾರಾಷ್ಟ್ರದ ಕೊಯ್ನಾ ಜಲ ವಿದ್ಯುತ್ ಯೋಜನೆಯಲ್ಲಿ ನೌಕರಿ. 1962ರಿಂದ ಮೂವತ್ತೈದು ವರ್ಷ ಕರ್ನಾಟಕದ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ 1997ರಲ್ಲಿ ಸ್ವ-ಇಚ್ಛೆಯಿಂದ ಸರ್ಕಾರಿ ಸೇವೆಯಿಂದ ನಿವೃತ್ತಿ. 1986ರಿಂದ ಕೃಷ್ಣರಾಜಸಾಗರದಲ್ಲಿರುವ ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜಿನಲ್ಲಿ ಆತಿಥೇಯ ಉಪನ್ಯಾಸಕರು.

ರಾಮನಾಥ ಭಟ್ಟರಿಗೆ ಶಾಲಾ ದಿನಗಳಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ಅರುವತ್ತರ ದಶಕದಲ್ಲಿ ರವೀಂದ್ರನಾಥ ಠಾಕೂರರ ಸಾಹಿತ್ಯದ ಆಕರ್ಷಣೆ. ಸರ್ಕಾರಿ ಸೇವಾವಧಿಯ ಬಿಡುವಿಲ್ಲದ ದಿನಗಳಲ್ಲಿಯೂ ಸಾಹಿತ್ಯಾಸಕ್ತಿಯ ಪೋಷಣೆ ಹಾಗೂ ಅಧ್ಯಯನ. ರವೀಂದ್ರನಾಥ ಠಾಕೂರರ ಗೀತಾಂಜಲಿ ಯನ್ನುಳಿದು ಬೇರೆ ಕವಿತೆಗಳು ಕನ್ನಡಕ್ಕೆ ಅನುವಾದವಾಗದಿರುವ ಕೊರತೆಯನ್ನು ನೀಗಿಸಲು ವಿಶೇಷ ಗಮನ. ಇದರ ಫಲವಾಗಿ 1999ರಲ್ಲಿ ರವೀಂದ್ರನಾಥ ಠಾಕೂರರ Gitanjali ಹಾಗೂ Crescent Moon ಕವನ ಸಂಗ್ರಹಗಳಿಂದ ಆಯ್ದ ಇನ್ನೂರು ಕವನಗಳ ಕನ್ನಡ ಅನುವಾದ ಗೀತಾಂಜಲಿ ಪ್ರಕಟಣೆ. ರವೀಂದ್ರರ ಉಳಿದ ಇಂಗ್ಲಿಷ್ ಕವನ ಸಂಗ್ರಹಗಳ ಕನ್ನಡ ಅನುವಾದಗಳ-ಫಲಸಂಚಯ, ವನಪಾಲಕ, ಕವಿತಾಸಂಚಯ, ಕಬೀರರ ಕವನಗಳು, ಬಿದಿಗೆಯ ಚಂದ್ರ ಮತ್ತು ಶೇಷಗೀತ – ಹಾಗೂ ರವೀಂದ್ರರು ಮತ್ತು ಗಾಂಧೀಜಿಯವರ ನಡುವಿನ ಸಂವಾದ ಹಾಗೂ ಪತ್ರಸಂಚಯ ಗುರುದೇವ ಮತ್ತು ಮಹಾತ್ಮ ಮತ್ತು ರವೀಂದ್ರರ ಜೀವನಚರಿತ್ರೆ ಗುರುದೇವ ಪ್ರಕಟಣೆ.

ಈಚಿನ ವರ್ಷಗಳಲ್ಲಿ ಬೆಳಕಿಗೆ ಬಂದ ರವೀಂದ್ರರ ಇನ್ನೂರಕ್ಕೂ ಹೆಚ್ಚು ಕವಿತೆಗಳೊಂದಿಗೆ ಈ ಹಿಂದೆಯೇ ಪ್ರಕಟವಾಗಿದ್ದ ಏಳೂ ಕನ್ನಡ ಸಂಪುಟಗಳಲ್ಲಿನ ಎಲ್ಲ ಕವಿತೆಗಳನ್ನೂ ಒಳಗೊಂಡಿರುವ ಬೃಹತ್ ಸಂಪುಟ ರವೀಂದ್ರ ಕಾವ್ಯ ಸಂಚಯ (ಪ್ರಕಟಣೆ : 2014).
(2018) ರವೀಂದ್ರ ಗದ್ಯ ಸಂಚಯ : ಭಾಗ ಒಂದು ರವೀಂದ್ರರ ಪ್ರಬಂಧಗಳ ಮತ್ತು ಭಾಷಣಗಳ ಮೊದಲ ಸಂಪುಟ.

error: Content is protected !!
Share This