ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023 ರಲ್ಲಿ ಆರು ಗೋಷ್ಠಿಗಳು ಸಂಪನ್ನಗೊಂಡವು. ಪ್ರತಿ ಗೋಷ್ಠಿಗೆ ಒಬ್ಬರು ಅಧ್ಯಕ್ಷರು,ಮೂವರು ಪ್ರಬಂಧಕಾರರು ಮತ್ತು ಒಬ್ಬರು ನಿರ್ವಾಹಕರು ಸೇರಿದಂತೆ 30 ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಅವರಲ್ಲಿ ಒಬ್ಬರನ್ನುಳಿದು ಎಲ್ಲ ವಿದ್ವಾಂಸರು ಭಾಗವಹಿಸಿದ್ದರು.‌ ಎಲ್ಲಾ ಗೋಷ್ಠಿಗಳು ನಿಗದಿಪಡಿಸಿದ ಸಮಯದಲ್ಲಿ ಸುಂದರವಾಗಿ ಮೂಡಿಬಂದವು. ಗೋಷ್ಠಿಗಳ ಉದ್ಘಾಟನೆಯನ್ನು ಸಂಸ್ಕೃತಿ ಚಿಂತಕ ರೋಹಿತ್ ಚಕ್ರತೀರ್ಥ ನಡೆಸಿಕೊಟ್ಟರು.ಗೋಷ್ಟಿಗಳ ಸಂಯೋಜಕರು ನಾರಾಯಣ ಎಮ್.ಹೆಗಡೆ.

error: Content is protected !!
Share This