ಸಿದ್ದಾಪುರದ ಶ್ರೀ ಅನಂತ ಯಕ್ಷ ಕಲಾಪ್ರತಿಷ್ಠಾನ ನೀಡುವ ರಾಜ್ಯಮಟ್ಟದ ಅನಂತ ಶ್ರೀ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ, ಮೇಲುಕೋಟೆ ಸಂಸ್ಕೃ ತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ವಿ.ಉಮಾಕಾಂತ ಭಟ್ ಕೆರೇಕೈ ಅವರಿಗೆ ಪ್ರಕಟಿಸಲಾಗಿದೆ.

ಈ ವಿಷಯ ತಿಳಿಸಿದ ಪ್ರತಿಷ್ಠಾನದ ಕಾರ್ಯದರ್ಶಿ, ಭಾಗವತ ಕೇಶವ ಹೆಗಡೆ ಕೊಳಗಿ, ಕಳೆದ ಐದು ದಶಕಗಳಿಂದ ತಾಳಮದ್ದಲೆ ಕ್ಷೇತ್ರದಲ್ಲಿ ಹೆಸರು ಮಾಡಿದ ಕೆರೇಕೈ ಅವರು ಯಕ್ಷಗಾನದ ಮೇರು ಕಲಾವಿದ ದಿ. ಕೊಳಗಿ ಅನಂತ ಹೆಗಡೆ ಅವರ ಒಡನಾಡಿಯೂ ಆಗಿದ್ದವರು. ಸಂಸ್ಕೃತ, ಕನ್ನಡ, ಆಂಗ್ಲ ಭಾಷೆಯ ಪಂಡಿತರು. ಪ್ರವಚನಕಾರರು, ಯಕ್ಷಗಾನ ಕಲಾವಿದರೂ ಆಗಿರುವ ಅವರು, ಲೇಖಕರು, ಕೃತಿಕಾರರು. ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿ ಕೂಡ ಪಡೆದ ಕೆರೇಕೈ ಅವರಿಗೆ ಅನಂತ ಶ್ರೀ ಪ್ರಶಸ್ತಿ ಪ್ರದಾನ ಮಾಡುತ್ತಿರುವದು ಹೆಮ್ಮೆ ಎಂದರು.

error: Content is protected !!
Share This