ಉಪ್ಪಿನಕುದ್ರು ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬ ಹಾಗೂ ಕೊಗ್ಗ ಕಾಮತರ ಜನ್ಮ ಶತಮಾನೋತ್ಸವ ದ ಅಂಗವಾಗಿ ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ online ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಇಡೀ ವರ್ಷ ನಡೆವ ಆಚರಣೆಯ ಲ್ಲಿ ಅನೇಕ ಬಗೆಯ ವಿಶೇಷ ಪ್ರಯತ್ನ, ಸ್ಪರ್ಧೆ ನಡೆಸಲು ಉದ್ದೇಶಿಸಲಾಗಿದ್ದು ಈ ದಿಶೆಯಲ್ಲಿ “ಹಳ್ಳಿ ಯೆಡೆಗೆ ಗೊಂಬೆ ನಡಿಗೆ ” ಹನ್ನೆರಡು ತಿಂಗಳಲ್ಲಿ ತೀರಾ ಹಳ್ಳಿಗೆ ಈ ಕಲೆ ಪರಿಚಯಿಸುವ ಪ್ರಯತ್ನ ಕ್ಕೆ ಕೈ ಹಾಕಲಾಗಿದೆ. ಈ ನಮ್ಮ ಪ್ರಯತ್ನಕ್ಕೆ ಪ್ರತಿ ತಿಂಗಳ ಕಾರ್ಯಕ್ರಮ ಕ್ಕೆ ಹನ್ನೆರಡು ಪ್ರಾಯೋಜಕರ ಅಗತ್ಯ ವಿದೆ. ಆಸಕ್ತರು ಸಂಪರ್ಕಿಸಿ ದಲ್ಲಿ ಈ ಬಗ್ಗೆ ಟ್ರಸ್ಟ್ ದಿಟ್ಟ ಹೆಜ್ಜೆ ಯಿರಿಸಿ ಯಶಸ್ವಿ ಗೊಳಿಸುವಲ್ಲಿ ಪ್ರಯತ್ನಿಸಲಿದೆ. ಈ ಎಲ್ಲಾ ವಿನೂತನ, ವಿಶಿಷ್ಟ, ವಿಶೇಷ ಪ್ರಯತ್ನ ಕ್ಕೆ ತಮ್ಮೆಲ್ಲರ ತುಂಬು ಹ್ರದಯದ ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನ ಖಂಡಿತಾ ಬೇಕಾಗಿದೆ.
www.yakshaganapuppets.org

error: Content is protected !!
Share This