ಸಾಮಾಗ್ರಿಗಳು
ಸ್ವೀಟ್ ಕಾರ್ನ್ – ಒಂದು ಕಪ್, ಜೀರಿಗೆ- ಎರಡು ಟೀ ಸ್ಪೂನ್, ಕಡ್ಲೆ ಹಿಟ್ಟು- ಒಂದು ಕಪ್, ಅಕ್ಕಿ ಹಿಟ್ಟು-ಕಾಲು ಕಪ್, ಅರಶಿನ – ಅರ್ಧ ಟೀ ಸ್ಪೂನ್, ಹಸಿ ಮೆಣಸಿನ ಕಾಯಿ-ಎರಡು, ಉಪ್ಪು ರುಚಿಗೆ ತಕ್ಕ ಹಾಗೆ, ನೀರು- ಸ್ವೀಟ್ ಕಾರ್ನ್ ಬೇಯಿಸಲು.
ತಯಾರಿಸುವ ಕ್ರಮ
ಬಿಡಿಸಿದ ಸ್ವೀಟ್ ಕಾರ್ನ್ಗಳನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು (ಕುಕ್ಕರ್ನಲ್ಲಾದರೆ ಒಂದು ವಿಸಿಲ್). ಇದಕ್ಕೆ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ, ಅರಶಿನ ಪುಡಿ ಮತ್ತು ಉಪ್ಪನ್ನು ಹಾಕಿ, ಚೆನ್ನಾಗಿ ಕಲಸಬೇಕು. (ಅಗತ್ಯವಿದ್ದರೆ ಮಾತ್ರ ನೀರು ಹಾಕಿದರೆ ಸಾಕು. ಬೆಂದ ಸ್ವೀಟ್ ಕಾರ್ನ್ನಲ್ಲೇ ಸ್ವಲ್ಪ ನೀರು ಇರುತ್ತದೆ) ಹತ್ತು ನಿಮಿಷಗಳ ಬಳಿಕ, ಒಲೆ ಮೇಲೆ ಬಾಣಲೆಯಲ್ಲಿ ಎಣ್ಣೆ ಇಟ್ಟು, ಕಾದ ಎಣ್ಣೆಯಲ್ಲಿ ಎರಡು ಸ್ಪೂನ್ ಎಣ್ಣೆಯನ್ನು ಈ ಹಿಟ್ಟಿಗೆ ಹಾಕಿ ಮತ್ತೊಮ್ಮೆ ಕಲಸಬೇಕು. ಆಮೇಲೆ ಸ್ವಲ್ಪ ಸ್ವಲ್ಪವೇ ಹಿಟ್ಟನ್ನೂ ಉಂಡೆ ಮಾಡಿ ಸ್ವಲ್ಪ ಚಪ್ಪಟೆ ಮಾಡಿ ಎಣ್ಣೆಯಲ್ಲಿ ಬಿಡಬೇಕು. ಕೆಂಪಗಾದ ಮೇಲೆ, ಎಣ್ಣೆಯಿಂದ ತೆಗೆದರೆ ಮುಗಿಯಿತು. ಸಾಸ್ ಜೊತೆಗೋ ಅಥವಾ ಪುದೀನಾ ಚಟ್ನಿ ಜೊತೆಗೋ ಇದನ್ನು ತಿನ್ನಬಹುದು.