ಹರಿಕಥಾ ಪರಿಷತ್ ಮಂಗಳೂರು ಇದರ ಮಂಗಳೂರು ವಲಯ ಸದಸ್ಯರ ಸಮಾವೇಶವು ದಿನಾಂಕ 29-06-2023ರಂದು ಕದ್ರಿಯ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ನಡೆಯಲಿರುವುದು. ಸಮಾವೇಶದಲ್ಲಿ ಮೊದಲಿಗೆ ಕದ್ರಿ ಕಂಬಳದ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಹಾಗೂ ಕಾವೂರು ಶ್ರೀ ಮುಖ್ಯಪ್ರಾಣ ಭಜನಾ ಮಂಡಳಿ ಇವರಿಂದ ‘ದಾಸ ಸಂಕೀರ್ತನೆ’ ನಡೆಯಲಿರುವುದು. ಬಳಿಕ ‘ಹರಿಕಥಾ ರಂಗ-ನಿರೀಕ್ಷೆಗಳು ಹಾಗೂ ಸವಾಲುಗಳು’ ಎಂಬ ವಿಷಯದಲ್ಲಿ ಸಂವಾದ ಗೋಷ್ಠಿ ನಡೆಯಲ್ಲಿದ್ದು, ಹರಿದಾಸರು ಹಾಗೂ ವಕೀಲರಾದ ಶ್ರೀ ಮಹಾಬಲ ಶೆಟ್ಟಿ ಕೂಡ್ಲು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪರಿಷತ್ತಿನ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಶ್ರೀ ಹರಿಕೃಷ್ಣ ಪುನರೂರು ಇವರು ನೆರವೇರಿಸಲಿದ್ದಾರೆ.
ಸಂವಾದ ಗೋಷ್ಠಿಯಲ್ಲಿ ಸಂಪನ್ಮೂಲ ಮಹನೀಯರಾದ ಬಹುಶ್ರುತ ವಿದ್ವಾಂಸರು ಹಾಗೂ ವಿಮರ್ಶಕರಾದ ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಧನಂಜಯ್ ಕುಂಬ್ಳೆ, ನಿವೃತ್ತ ಪ್ರಾಂಶುಪಾಲರು ಹಾಗೂ ಯಕ್ಷಗಾನ ಅರ್ಥಧಾರಿಯಾದ ಶ್ರೀ ಸರ್ಪಂಗಳ ಈಶ್ವರ ಭಟ್, ಅರ್ಥಧಾರಿಗಳು ಹಾಗೂ ವಿಮರ್ಶಕರಾದ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಕೋಟೆಕಾರಿನ ಡಾ. ಮಾಧವಿ ವಿಜಯಕುಮಾರ್ ಭಾಗವಹಿಸಲಿರುವರು.
ಈ ಕಾರ್ಯಕ್ರಮಕ್ಕೆ ಹರಿಕಥಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೆ. ಮಹಾಬಲ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಕೆ. ನಾರಾಯಣ ರಾವ್, ಮಂಗಳೂರು ಸಂಚಾಲಕರಾದ ಶ್ರೀ ಸುಧಾಕರ ರಾವ್ ಪೇಜಾವರ, ಪ್ರಧಾನ ಕಾರ್ಯದರ್ಶಿಯಾದ ಶ್ರೀ ತೋನ್ಸೆ ಪುಷ್ಕಳ ಕುಮಾರ್, ಕೋಶಾಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್, ಕಾಸರಗೋಡು ಜಿಲ್ಲಾ ಸಂಚಾಲಕರಾದ ಶ್ರೀ ಶಂನಾಡಿಗ ಕುಂಬ್ಳೆ ಹಾಗೂ ಉಡುಪಿ ಜಿಲ್ಲಾ ಸಂಚಾಲಕರಾದ ಶ್ರೀ ವೈ. ಅನಂತಪದ್ಮನಾಭ ಭಟ್ ಸರ್ವರಿಗೂ ಸ್ವಾಗತ ಕೋರಿದ್ದಾರೆ.