ಎ. ಈಶ್ವರಯ್ಯ

ಹಿರಿಯ ಪತ್ರಕರ್ತ,ಬಹುಮುಖ ಪ್ರತಿಭೆ ಅನಂತಪುರ ಈಶ್ವರಯ್ಯ (78) ಅಸೌಖ್ಯದಿಂದ ಡಿ. 30ರಂದು ವಿಬುಧಪ್ರಿಯನಗರದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಈಶ್ವರಯ್ಯನವರು ಮೂಲತಃ ಕಾಸರಗೋಡಿನ ಅನಂತಪುರದವರು. ಉಡುಪಿ ಎಂಜಿಎಂ ಕಾಲೇಜಿನಲ್ಲಿ ಬಿ.ಎ. ಪದವಿಗಳಿಸಿ ಕೆಲವು ವರ್ಷಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಲೇಖನಗಳು ಸುಧಾ, ಮಯೂರ, ಕಸ್ತೂರಿ, ಪ್ರಜಾಮತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಸಿನೆಮಾ, ಸಂಗೀತ ಲೇಖನಗಳು ಫಿಲ್ಮ್ ಫೇರ್‌ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಕಲಾವಿದರೂ ಆಗಿದ್ದ ಈಶ್ವರಯ್ಯನವರು ವಿವಿಧ ಸಂಗೀತ ಉಪಕರಣ, ಕರ್ನಾಟಕ ಸಂಗೀತ ಹಾಡುಗಾರಿಕೆ, ಯಕ್ಷಗಾನ ಭಾಗವತಿಕೆ ತಿಳಿದವರಾಗಿದ್ದರು. ವಿದ್ವತ್ಪೂರ್ಣ ವಿಚಾರ ಮಂಡಿಸುವ ವಾಗ್ಮಿಗಳೂ ಆಗಿದ್ದರು.

1972ರಲ್ಲಿ ‘ಉದಯವಾಣಿ’ಗೆ ಸಹಾಯಕ ಸಂಪಾದಕರಾಗಿ ಸೇರಿದ ಈಶ್ವರಯ್ಯನವರು, ನಾಲ್ಕು ದಶಕಗಳ ಕಾಲ ಪತ್ರಕರ್ತರಾಗಿ ‘ಉದಯವಾಣಿ’ ಸಮೂಹದಲ್ಲಿಯೇ ಸೇವೆ ಸಲ್ಲಿಸಿದರು. ಈಶ್ವರಯ್ಯನವರಿಗೆ ಆಂಗ್ಲ ಭಾಷೆ, ಸಾಹಿತ್ಯದಲ್ಲಿ ಅಪಾರ ಜ್ಞಾನಹೊಂದಿದ್ದರು.

ಇವರ ಸಾಧನೆಗೆ ರಾಜ್ಯ ಪತ್ರಿಕಾ ಅಕಾಡೆಮಿ, ಲಲಿತಕಲಾ ಅಕಾಡೆಮಿ, ಪೇಜಾವರ ಮಠದ ರಾಮವಿಠ್ಠಲ ಪ್ರಶಸ್ತಿ ಹಲವಾರು ಗೌರವ ಸಂದಿವೆ. ಈಶ್ವರಯ್ಯನವರಿಗೆ 70 ತುಂಬಿದಾಗ 2010ರಲ್ಲಿ ಉಡುಪಿ ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ಇವರ ಎಲ್ಲ ಕ್ಷೇತ್ರಗಳ ಬಗೆಗೆ ವಿಚಾರ ಸಂಕಿರಣ, ಅಭಿನಂದ ನಡೆದಿತ್ತು.

error: Content is protected !!
Share This