ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಸುರೇಶ್ ಗಾಣಿಗ (ಸೂರ ಗಾಣಿಗ) ಪಡುಕೋಣೆ, (84 ವರ್ಷ) ಇವರು 23.04.2020 ರ ರಾತ್ರಿ 10.00 ಘಂಟೆಗೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಕಳೆದ ಎರಡು ದಿನಗಳಿಂದ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಇವರು ಕುಂದಾಪುರ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಸೌಮ್ಯ ಸ್ವಭಾವದವರೂ, ಸಜ್ಜನರೂ ಆಗಿದ್ದ ಇವರು 50 ವರ್ಷಗಳಿಗೂ ಹೆಚ್ಚು ಕಾಲ ಬಡಗುತಿಟ್ಟಿನ ವಿವಿಧ ಮೇಳಗಳಲ್ಲಿ ಕಲಾ ಸೇವೆಯನ್ನು ಮಾಡಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುತ್ತಾರೆ. ಸ೦ಸ್ಥೆಯು ಇವರಿಗೆ ಪ್ರೊ. ಬಿ. ವಿ. ಆಚಾರ್ಯ ಸ್ಮರಣೆಯಲ್ಲಿ”ಯಕ್ಷಗಾನ ಕಲಾರ೦ಗ ಪ್ರಶಸ್ತಿ “ನೀಡಿ ಗೌರವಿಸಿತ್ತು. ಇವರ ಕಲಾ ಸೇವೆಯನ್ನು ಸ್ಮರಿಸುತ್ತಾ ಯಕ್ಷಗಾನ ಕಲಾರ೦ಗದ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!
Share This