ಮೇ 16, 2020 ವೃತ್ತಿಪರ ಶ್ರೇಷ್ಠ ತಾಳಮದ್ದಳೆ ಕಲಾವಿದರ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಯಕ್ಷಗಾನ ಕಲಾವೃಂದ ಅಮೇರಿಕಾ ಇದರ ವಾಸು ಐತಾಳ ಮತ್ತಿತರರಿಂದ ಸಂಯೋಜಿಸಲ್ಪಟ್ಟು ನೆರವೇರಿದೆ.

ಕನ್ನಡದ ಶ್ರೇಷ್ಠ ವಾಗ್ಪರಂಪರೆ ದೊಡ್ಡ ಮಟ್ಟದಲ್ಲಿ ದೇಶ ವಿದೇಶ ತಲುಪಿದೆ. ಅಂದಾಜು 3000ಕ್ಕೂ ಮಿಕ್ಕ ಭಾರತ, ಯುರೋಪು, ಅರಬಿ, ಸಿಂಗಪುರ, ಅಮೇರಿಕಾ, ಕೆನಡಾ ಮೊದಲಾದ ದೇಶದಲ್ಲಿರುವವರು ವೀಕ್ಷಕರು/ಶ್ರೋತೃಗಳು ಕಾರ್ಯಕ್ರಮ ನೆಡೆಯುವಾಗಲೆ ಅಂತರ್ಜಾಲದ ಮೂಲಕ ನೋಡಿ ಭಾಗವಹಿಸಿದರು.

ಕೆ. ಜೆ. ಗಣೇಶ್ ಸಹೋದರರ ಭಾಗವತಿಕೆ ಚಂದ ಬಂತು. ಡಾ. ಎಂ. ಪ್ರಭಾಕರ ಜೋಶಿ, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗ ಭಟ್ ರ ಅರ್ಥ ಪಾತ್ರಕ್ಕೆ ಚಂದವಾಗಿ ಹೊಂದುವಂತೆ 2 ಘಂಟೆ ಕಾರ್ಯಕ್ರಮವನ್ನು ವಿಶೇಷವಾಗಿ ನೆಡೆಸಿಕೊಟ್ಟರು. ಶಶಿಧರ ಸೋಮಯಾಜಿ ಅವರು ಆರಂಭದಲ್ಲಿ ನೀಡಿದ ಪರಿಚಯ ಆಡಿದಮಾತು ಒಳ್ಳೆಯ ಪ್ರಸ್ತಾವನೆಯಾಯಿತು. ಇದು ವಿಶೇಷ. ಇದು ಈ ಮಟ್ಟದಲ್ಲಿ ಗುಣಮಟ್ಟದಲ್ಲಿ ಮೊದಲು. ತಾಳಮದ್ದಲೆ ಬಹುರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿದೆ. ಇದಕ್ಕೆ ಶ್ರಮಿಸಿದ ಸಂಯೋಜಕರು ಕಲಾವಿದರು ಎಲ್ಲರೂ ಯಕ್ಷಗಾನವನ್ನು ಇಲ್ಲಿಗೆ ಮುಟ್ಟಿಸುವಲ್ಲಿ ಬಹಳ ಕಳಕಳಿ ಕೆಲಸ ಇದೆ.

ನೋಡಿ ಹಂಚಿಕೊಳ್ಳಿ: https://youtu.be/YwrCs-3rg_M

-ರಘು ಕಟ್ಟಿನಕೆರೆ

error: Content is protected !!
Share This