Obituary

ಹರಿದಾಸ ‘ಕೀರ್ತನ ಕೇಸರಿ’ ವಾದೀಶಾಚಾರ್

ನವ ವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು (ಶ್ರೀ ರಾಘವೇಂದ್ರ ಮಠ) ಇದರ ಸಂಸ್ಥಾಪಕ ಹಾಗೂ ಖ್ಯಾತ ನರ್ತನ ಹರಿದಾಸ ‘ಕೀರ್ತನ ಕೇಸರಿ’ ವಾದೀಶಾಚಾರ್ (71) ಅವರು ನ. 4 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಹರಿಕೀರ್ತನೆ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಪ್ರೋತ್ಸಾಹ ನೀಡುತ್ತಿದ್ದರು. ಪುತ್ತಿಗೆ ಸುಗುಣೇಂದ್ರ ತೀರ್ಥರೊಂದಿಗೆ ದೇಶ ವಿದೇಶ ಪರ್ಯಟನೆಗೈದು ಧರ್ಮ ಬೋಧನೆ ಹಾಗೂ ಪ್ರಚಾರದಲ್ಲಿ ತೊಡಗಿದ್ದರು. ಟಿ. ವಿ. ವಾಹಿನಿಗಳಲ್ಲಿ ಧಾರ್ಮಿಕ ಪ್ರವಚನ ನೀಡುತ್ತಿದ್ದರು. ತಿರುಪತಿಯ ಟಿಟಿಡಿ ಯಿಂದ ಪುರಂದರ ಅನುಗ್ರಹ ಪ್ರಶಸ್ತಿ ಪಡೆದಿರುವ ಅವರನ್ನು ಹಲವಾರು ಸಂಘ ಸಂಸ್ಥೆ ಗಳು ಗೌರವಿಸಿವೆ.

Sri Peradanji Gopalakrishna Bhat

We have lost a Senior Artist-Actvist Sri Peradanji Gopalakrishna Bhat of Kotur, Kasargodu. He was 82. Sri Peradanji was a leading Organiser, actor and activist a silent, low profile achiever. He along with Sri Adka Goapalakrishna Bhat and Late M.V. Ballullaya (journalist) designed and executed the historical Malayalam Yakshagana Experiment which met with great success. We pray for his soul.

ಕಲಾವಿದ, ಪ್ರಸಂಗಕರ್ತ ಪೆರಡಂಜೆ ಕೆ.ಗೋಪಾಲಕೃಷ್ಣ ಭಟ್

ನಿವೃತ್ತ ಅಂಚೆ ಮಾಸ್ತರ್, ಹಿರಿಯ ಯಕ್ಷಗಾನ ಹವ್ಯಾಸಿ ಕಲಾವಿದ, ಪ್ರಸಂಗಕರ್ತ, ಸಂಘಟಕ ಪೆರಡಂಜೆ ಕೆ. ಗೋಪಾಲಕೃಷ್ಣ ಭಟ್ (72) ಅವರು ಅ.8ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತ ದಿ| ಎಂ.ವಿ. ಬಳ್ಳುಳ್ಳಾಯ ಅವರೊಂದಿಗೆ ಸೇರಿ ಕೋಟೂರು ಕಾರ್ತಿಕೇಯ ಕಲಾನಿಲಯವನ್ನು ಕಟ್ಟಿ ಬೆಳೆಸಿದ್ದರು. ಕೋಟೂರಿನಲ್ಲಿ ಅಂಚೆ ಕಚೇರಿ ತೆರೆಯಲು ಕಾರಣರಾಗಿ, ನಿವೃತ್ತರಾಗುವವರೆಗೆ ಮುಖ್ಯ ಅಂಚೆ ಮಾಸ್ತರ್ ಆಗಿ ದುಡಿದಿದ್ದರು. ಹವ್ಯಾಸಿ ನಾಟಕ ಕಲಾವಿದರಾಗಿ, ಯಕ್ಷಗಾನ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದರು. ಲಂಕಾಪತನ, ರಾಜಾ ದಿಲೀವ, ಸ್ಕಂದ ಪರಿಣಯ, ಮುಳಿಯಾರು ಕ್ಷೇತ್ರ ಮಹಾತ್ಮೆ, ಸೌಭಾಗ್ಯ ಸುಂದರಿ, ದಕ್ಷಾಧ್ವರ (ಹವ್ಯಕ) ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಮೊದಲ ಬಾರಿಗೆ ಮಲಯಾಳ ಭಾಷೆಯಲ್ಲಿ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶಿಸಿದ ಖ್ಯಾತಿ ಇವರದ್ದಾಗಿದೆ

ಉದಯವಾಣಿ

ARTIST KARKALA GOVINDA PRABHU PASSES AWAY

A long serving Yakshagana Maddalegara  (percussionist),- Karkala Kabettu Govinda Prabhu passed away at the age of 84. He was a Maddalegara and Bhagavatha in many associations and especially was an active member of Sri Venkataramana Yakshgana Kala Samithi Karkala.

He was active in the period, 1960 to 2000. He was a very enthusiastic and dedicated lover of art and was a keen spectator even after retiring as an artist. His brother Late K Martappa Prabhu was also a Maddalegara.

 

D V Shivaramayya Passed Away

Sri D V Shivaramayya, a leading Yakshagana organiser passed away at his residence in Dombe, Khandika Sagara Shimoga District. He was 74. A dedicated Yakshagana patron, especially towards the Talamaddale form of Yakshagana.

D V S was the chief of the Thripuranthakeswara Yakshgana Sangha at Village Shirivante Sagara. He made the Shrivanthe Temple a pilgrim centre for Talamaddale. He worked for over 3 decades as the organiser of the Chaturmasya Yakhe Uday Kalavidaru hagana series there.

He was an able theater actor active with the the Udaya Kalavidaru Sagara. A friendly, fine gentleman and a committed art connoisseur DVS will be remembered long.

ಅಗಲಿದ ಹಿರಿಯ ಅರ್ಥದಾರಿ ಪಿ. ಎಲ್. ಉಪಾಧ್ಯಾಯರು

ಇತ್ತೀಚೆಗೆ ನಮ್ಮನಗಲಿದ ಹಿರಿಯ ತಾಳಮದ್ಡಲೆ ಅರ್ಥದಾರಿ, ಪಿ. ಎಲ್. ಉಪಾಧ್ಯಾಯರು (90) ಮಂಗಳೂರಿನ ಯಕ್ಷಗಾನ ವಲಯದಲ್ಲಿ ಒಬ್ಬ ಸ್ಮರಣಿಯ ಹಿರಿಯರು, 1975 ರ ತನಕ ತಾಳಮದ್ಡಲೆಯಲ್ಲಿ ಸಕ್ರಿಯರಾಗಿದ್ದರು.

ಆ ಬಳಿಕ ತನ್ನ ಉದ್ಯಮ – ಹೊಟೆಲ್ ದುರ್ಗಾಭವನ, ಮಣ್ಣಗುಡ್ಡೆ, ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿ ಬಂದುದರಿಂದ ತುಸು ದೂರ ಸರಿದರು. ಪೊಳಲಿ ಶಾಸ್ತ್ರಿ, ಕುಬಣೂರು ಬಾಲಕೃಷ್ಣ ರಾವ್, ಮಂದಾರ ಕೇಶವ ಭಟ್, ಮಾಧವ ಆಚಾರ್ಯ , ಹೊಸಬೆಟ್ಟು ನಾರಾಯಣ ರಾವ್, ಕೊಂಡಾನ ವಾಮನ ಹರಿದಾಸ್, ಕೂಳೂರು ಶಿವ ರಾವ್, ಬಾಳ ರಮಾನಾಥ ರಾವ್, ಮೊದಲಾದ ಕಲಾವಿದರ ಜತೆ ಸಕ್ರಿಯರಾಗಿದ್ದರು. ಅವರ ಶ್ರೀರಾಮ, ಸುಧನ್ವ, ಕೈಕೇಯಿ, ಧರ್ಮರಾಜ, ವಿಧುರ ಇತ್ಯಾದಿ ಪಾತ್ರಗಳು ಅವರಿಗೆ ಪ್ರಸಿದ್ಧಿ ನೀಡಿದ್ಡವು. ಮಂಗಳೂರಿನ ಬ್ರಾಹ್ಮಣ ಸಭಾ, ಮತ್ತು ಇತರ ಹಲವು ಸಾಂಸ್ಕೃತಿಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದ ಉಪಾಧ್ಯಾಯರು ಓರ್ವ ಮಿತಭಾಷಿ, ಸ್ನೇಹ ಪೂರ್ಣ ನಡವಳಿಕೆಯ ಸುಸಂಸ್ಕೃತ ವ್ಯಕ್ತಿಯಾಗಿ ಆಪ್ತರಾಗಿದ್ದರು.

– ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು

error: Content is protected !!
Share This