ಹಿರಿಯ ಯಕ್ಷಗಾನ ಅರ್ಥಧಾರಿ ಅನಂತ ವೈದ್ಯ
ಮಲೆನಾಡಿನ ಯಕ್ಷಚೇತನಗಳು-35
ಹೆಬ್ಬೈಲು ರಾಮಪ್ಪ (1938-1988) ಆಟದ ರಾಮಯ್ಯ ಎಂದು ಖ್ಯಾತರಾಗಿದ್ದ ಶ್ರೀ ಜಿ.ರಾಮಪ್ಪ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪಗದ್ದೆ ಕೆದ್ಲಗುಡ್ಡೆಯಲ್ಲಿ ಪುಟ್ಟಪ್ಪ ಹಾಗೂ ಸೂಲಿಂಗಮ್ಮ ಇವರ ಮಗನಾಗಿ 1938ರಲ್ಲಿ ಜನಿಸಿದರು. ಅವರಿಗೆ ಹಾಲಮ್ಮ, ಹೂವಮ್ಮ, ಲಿಂಗಮ್ಮ,ವೀರಭದ್ರಪ್ಪ, ಪುಟ್ಟಪ್ಪ ಎಂಬ ಸಹೋದರ, ಸಹೋದರಿಯರು....
ಕೆರೆಮನೆ ವೆಂಕಟಾಚಲ ಭಟ್(1936-1998)
ಮಲೆನಾಡಿನ ಯಕ್ಷಚೇತನಗಳು-34 ಶ್ರೀ ಕೆರೆಮನೆ ವೆಂಕಟಾಚಲ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ಕೆರೆಮನೆಯಲ್ಲಿ 01 ಸೆಪ್ಟೆಂಬರ್ 1936ರಲ್ಲಿ ವೆಂಕಟರಮಣ ಭಟ್ಟ ಅವರ ಮಗನಾಗಿ ಜನಿಸಿದರು. ಅವರಿಗೆ ರಾಮಚಂದ್ರ, ಗಣಪತಿ ಎಂಬ ಸಹೋದರರು. ಮೂಲತಃ ಅವರದ್ದು ಪುರೋಹಿತ ಮನೆತನ. ತಂದೆಯ ಹಾದಿಯನ್ನು ಉಳಿದ...
“ಬಲಿಪರಿಗೆ ಆದರಾಂಜಲಿ”
- ಲೇಖಕರು: ಡಾ|| ಕೆ. ಎಂ. ರಾಘವ ನಂಬಿಯಾರ್ ಬಲಿಪ ಕಿರಿಯ ನಾರಾಯಣ ಭಾಗವತರ ಮನೆಯ ಶ್ರದ್ಧಾಂಜಲಿ ಸಭೆಯಲ್ಲಿ (1-3-2023) ನಾನು ಏನು ಹೇಳಿದೆ ಎಂದು ನೆನಪಿಸಿಕೊಳ್ಳುತ್ತೇನೆ. ಎಷ್ಟೆಷ್ಟೊ ಕಲಾವಿದರು ವಿದ್ವಾಂಸರ ಮಾತುಗಳನ್ನು ಸ್ವಯಂ ಆಗಿ ವರದಿಮಾಡಿ ಪತ್ರಿಕೆಯಲ್ಲಿ ಬರುವಹಾಗೆ ಮಾಡಿದ ನನ್ನ ಪತ್ರಿಕಾ ಪೀಳಿಗೆಯವರಿಗೆ ವರದಿ ಮಾಡಲು...
ಅಂಬಾತನಯ ಮುದ್ರಾಡಿ ಸ್ಮರಣೀಯ ಚಿತ್ರಗಳು
ನಮ್ಮನ್ನಗಲಿದ ಅಂಬಾತನಯ ಮುದ್ರಾಡಿಯವರು ಫೆಬ್ರವರಿ 11ರಂದು ಉಡುಪಿಯಲ್ಲಿ ಜರುಗಿದ ಯಕ್ಷಗಾನ ಸಮ್ಮೇಳನದಲ್ಲಿ ಪಾಲ್ಗೊಂಡು ಸಂತಸ ಪಟ್ಟ ಕೆಲವು ಸ್ಮರಣೀಯ...
ಗಗನಕ್ಕೇರಿದ್ದ ಬಲಿಪ ಗರ್ಜನೆ
ಕಲಾಸರಸ್ವತಿಯ ಮುಂದೆ ನಾನೊಬ್ಬ ಜ್ಞಾನದಾಹಿ
ಕಣ್ಮರೆಯಾದ ಯಕ್ಷಲೋಕದ ಧ್ರುವ ನಕ್ಷತ್ರ
ಕುಂಬಳೆ ಸುಂದರ ರಾವ್ (ಮಾರ್ಚ್೨೦, ೧೯೩೪- ನವಂಬರ ೩೦, ೨೦೨೨) ಇಡೀ ರಾತ್ರಿ ನಡೆಯುತ್ತಿದ್ದ ʼಮಹಾರಥಿ ಕರ್ಣʼ ಯಕ್ಷಗಾನ ಪ್ರದರ್ಶನದಲ್ಲಿ ಒಟ್ಟು ಮೂರು ಕರ್ಣರಿರುತ್ತಿದ್ದರು. ಮೊದಲನೆಯ ಕರ್ಣ ಹುಡುಗ, ಉತ್ಸಾಹಿ, ಪುತ್ತೂರು ಶ್ರೀಧರ ಭಂಡಾರಿಯವರ ವೇಷ. ಎರಡನೆಯ ಕರ್ಣ ಬಹುಬಗೆಯ ಕ್ಲೇಷಗಳಿಗೊಳಗಾದವನು, ಉದ್ಯೋಗ ಪರ್ವದಲ್ಲಿ...
ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು
ಯಕ್ಷಗಾನದ ಮಾತಿನ ಮಾಣಿಕ್ಯ ಕುಂಬಳೆ ಸುಂದರ ರಾವ್ ನಮ್ಮನ್ನಗಲಿದರೂ ಅವರು ಕಲೆಯ ಮೂಲಕ ಜೀವಂತವಾಗಿಯೇ ಇದ್ದಾರೆ. ಅವರು ಸಾಧನೆ, ಏರಿದ ಎತ್ತರ ಶಬ್ದಗಳಿಗೆ ನಿಲುಕದ್ದು. ಆಟ- ಕೂಟದ ವೇದಿಕೆಯಲ್ಲಿ ಮಾತಿನ ಚಕ್ರವರ್ತಿಯಾಗಿ ಮಿಂಚಿದ್ದ ಅವರಿಗೆ ಇದೊಂದು ನುಡಿನಮನ. ಯಕ್ಷಗಾನದ ಕಳೆದ 100 ವರ್ಷಗಳ ಇತಿಹಾಸದಲ್ಲಿ ನನ್ನ ಕೇಳ್ಮೆಯಲ್ಲಿ,...
ಸುಂದರ ರಾವ್ ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ: ಪ್ರಭಾಕರ ಜೋಶಿ
'ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್ ಅವರು ಭಾರತದ ಮೌಖಿಕ ಕಲಾ ಪರಂಪರೆಯ ಶ್ರೇಷ್ಠ ವಾಗ್ಮಿ' ಎಂದು ಸ್ಮರಿಸುತ್ತಾರೆ ಅವರ ಒಡನಾಡಿಯಾಗಿದ್ದ ಹಾಗೂ ಅವರ ಜೊತೆಗೆ ಅನೇಕ ತಾಳಮದ್ದಲೆ ಕಾರ್ಯಕ್ರಮಗಳಲ್ಲಿ ಅರ್ಥದಾರಿಯಾಗಿ ಭಾಗವಹಿಸಿದ್ದ ಖ್ಯಾತ ಯಕ್ಷಗಾನ ವಿದ್ವಾಂಸ ಮತ್ತು ಸಂಶೋಧಕ ಡಾ.ಎಂ ಪ್ರಭಾಕರ ಜೋಶಿ ಅವರು. 'ಕುಂಬ್ಳೆ ಅವರು ಬಹಳ...
ಜಾಗರದ ಜೋಶಿಗೆ ರಾಜ್ಯೋತ್ಸವದ ಗರಿ
ಪ್ರಶಸ್ತಿಗೆ ಬೆಲೆ ಬಂತು : ಅಭಿನಂದನೆಗಳು
ರಾಜ್ಯೋತ್ಸವ ಪ್ರಶಸ್ತಿಯ ಈ ಬಾರಿಯ ಯಾದಿ ಡಾ. ಎಂ. ಪ್ರಭಾಕರ ಜೋಶಿಯವರ ಹೆಸರಿನಿಂದ ಧನ್ಯವಾಯಿತು. ಪ್ರದೇಶ, ವಯಸ್ಸು, ಜಾತಿ, ಆರೋಗ್ಯ ಇತ್ಯಾದಿ ನಿಜವಾಗಿ ಕಲಾ ಸಾಧನೆಯಲ್ಲಿ ಅಪ್ರಸ್ತುತವಾಗಿದ್ದರೂ ಪ್ರಶಸ್ತಿ ಆಯ್ಕೆಯಲ್ಲಿ ಮುಖ್ಯ ಮಾನದಂಡ ಆಗುವ ಸರಕಾರಿ ವ್ಯವಸ್ಥೆಯಲ್ಲಿ ಜೋಶಿಯವರಿಗೆ (76) ಈ ಮನ್ನಣೆ ದೊರೆಯಲು ತುಂಬ...
ಅಭಿಜ್ಞ ಡಾ. ಪ್ರಭಾಕರ ಜೋಷಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ
ಕಾರ್ಕಳ ತಾಲೂಕಿನ ಮಾಳದಿಂದ ಮಂಗಳೂರಿಗೆ ಬಂದು ನೆಲೆಸಿದ ತನ್ನ ಅದಮ್ಯ ಜೀವನಾಸಕ್ತಿ ಮಗು ಸಹಜ ಕುತೂಹಲಗಳಿಂದ ಬೆಳೆದ ಡಾ.ಪ್ರಭಾಕರ ಜೋಷಿ ಎಂಬ ಯಕ್ಷಗಾನದ ಹೆಮ್ಮೆಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಅವರನ್ನು ಕಾಣುವ ಪ್ರಯತ್ನವಿದು. ಯಕ್ಷಗಾನ -ತಾಳಮದ್ದಳೆ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧಕರಿವರು. ದಿ.ಶೇಣಿ...
ಕೋಡಿ ಕುಶಾಲಪ್ಪ ಗೌಡ
( ಮೇ ೩೧, ೧೯೩೧- ಸಪ್ಟಂಬರ ೨, ೨೦೨೨) ಹೈಸ್ಕೂಲಿನಲ್ಲಿ ಕನ್ನಡ ಕಲಿಸಿದ ಗುರುಗಳಾದ ಟಿ ಜಿ ಮುಡೂರರನ್ನು ಕಳಕೊಂಡ ನೋವು ಮರೆಯುವ ಮುನ್ನವೇ ನನಗೆ ಎಂ ಎ ಯಲ್ಲಿ ಪಾಠ ಮಾಡಿದ ಪ್ರೊ. ಕೋಡಿ ಕುಶಾಲಪ್ಪ ಗೌಡರನ್ನು ಕಳಕೊಳ್ಳಬೇಕಾಯಿತು. ಇವರೆಲ್ಲ ಬರೇ ಪಾಠ ಮಾಡಿದ ಮಾಸ್ತರರಾಗಿದ್ದರೆ ಇಷ್ಟೊಂದು ವಿಷಾದ ಹುಟ್ಟಿಕೊಳ್ಳುತ್ತಿರಲಿಲ್ಲ. ಅವರು...
ಉಡುಪಿ ಯಕ್ಷಗಾನ ಕಲಾರಂಗದ ಮಹಾಪೋಷಕ ತೋನ್ಸೆ ಮೋಹನದಾಸ ಪೈಗಳು
ಯಕ್ಷಗಾನ ಕಲಾರಂಗವು ‘ಉದಯವಾಣಿ’ಯಿಂದ ಪಡೆದ ಪ್ರಯೋಜನ ಅಪಾರ. ಉದಯವಾಣಿಯ ಸಂಸ್ಥಾಪಕ ತೋನ್ಸೆ ಮೋಹನದಾಸ ಪೈಯವರ ಋಣಭಾರವೂ ಸಂಸ್ಥೆಯ ಮೇಲಿತ್ತು. ಹಾಗಾಗಿ ಪೈಯವರನ್ನು ಕರೆದು ಗೌರವಿಸೋಣ ಎಂದು ನಿರ್ಧರಿಸಿದೆವು. ನಾವೇ ಅವರ ಮನೆಗೆ ತೆರಳಿ ಗೌರವಿಸುವುದೋ ಅಥವಾ ಅವರನ್ನೇ ನಮ್ಮ ಸಂಸ್ಥೆಗೆ ಆಹ್ವಾನಿಸುವುದೋ ಎಂಬ ಯೋಚನೆಯಲ್ಲಿ ಬಿದ್ದೆವು....