ಮೈಸೂರು, ಮೇ 13 – ಯಕ್ಷಗಾನ ಕಲೆ ಶ್ರೀಮಂತಗೊಳಿಸಿದ ಕೀರ್ತಿ ಡಾ. ಪ್ರಭಾಕರ ಜೋಶಿಯವರಿಗೆ ಸಲ್ಲುತ್ತದೆ ಎಂದು ಮಂಜೇಶ್ವರದ ಖ್ಯಾತ ವಿಮರ್ಶಕ ಡಾ. ರಮಾನಂದ ಬನಾರಿ ತಿಳಿಸಿದರು.
ಜಗನ್ಮೋಹನ ಅರಮನೆಯಲ್ಲಿ ಇಂದು ಡಾ. ಪ್ರಭಾಕರ ಜೋಶಿ ಅಭಿನಂದನಾ ಜೋಶಿ ವಾಗರ್ಥ ಗೌರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಪ್ರಾಚೀನ ಕಲೆಗಳಲ್ಲಿ ಒಂದಾದ ಯಕ್ಷಗಾನ ಕಲೆಯು ಇಂದಿಗೂ ತನ್ನ ಖ್ಯಾತಿಯನ್ನು ಉಳಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣಕರ್ತರು ಡಾ. ಪ್ರಭಾಕರ ಜೋಶಿಯವರೇ ಆಗಿದ್ದಾರೆ. ಯಕ್ಷಗಾನ ಕಲೆಯನ್ನು ಬೆಳೆಸಿ ಉಳಿಸುವತ್ತ ಸತತವಾಗಿ ಪ್ರಯತ್ನಿಸಿದ ಫಲವಾಗಿ ಅದು ಇಂದಿಗೂ ತನ್ನ ವೈಭವವನ್ನು ಉಳಿಸಿಕೊಂಡಿದೆ ಎಂದರು.
ಜೋಶಿಯವರು ಯಕ್ಷಗಾನವನ್ನು ತಾಳಮದ್ದಳೆಯಲ್ಲಿ ಅರ್ಥಗಾರಿಕೆಯನ್ನು ಪ್ರದರ್ಶಿಸುವ ಮೂಲಕ ಜಗತ್ತಿಗೆ ಪರಿಚಯಿಸುವುದರೊಂದಿಗೆ ಪಾರ್ಥಿ ಸುಬ್ಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಚರ್ಚೆಗಳ ಮೂಲಕವೇ ಹೊಸ ಅಧ್ಯಯಾವನ್ನು, ಕವನಗಳನ್ನು ರಚಿಸುವ ಶಕ್ತಿಯನ್ನು ಹೊಂದಿದವರಾಗಿದ್ದಾರೆ ಎಂದು ಹೇಳಿದರು. ಜೋಶಿಯವರು ನನಗೆ ಕೌಟುಂಬಿಕ ಪ್ರೀತಿಯನ್ನು ನೀಡಿದವರಾಗಿದ್ದರೂ ಜಗತ್ತಿನಲ್ಲಿ ಓಂಕಾರವನ್ನು ಬಿಟ್ಟರೆ ಪ್ರೀತಿ ಎಂಬ ಪದಕ್ಕೆ ವಿಶೇಷ ಗೌರವವಿದೆ. ನಾವು ಅವರನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಿದ್ದೇನೆ ಎಂದರು.
ಸಮಾರಂಭದಲ್ಲಿ ಮಂಗಳೂರು ಅರ್ಥಧಾರಿ ಸಂಶೋಧಕ ಡಾ. ಪ್ರಭಾಕರ ಜೋಶಿ, ಗೌರವಾಧ್ಯಕ್ಷ ಸೀತಾರಂ ಭಟ್, ದಾಮಲೆ, ಅಧ್ಯಕ್ಷ ಎಂ. ಬಾಲಚಂದ್ರ ದೋಂದ್ರೆ, ಖಜಾಂಚಿ ರಘುಪತಿ ಶಾಮಣ್ಣಕರ್ ಹಾಜರಿದ್ದರು.
ಸಂಜೆವಾಣಿ ದಿನಾಂಕ 13-05-2017 ರಲ್ಲಿ ಪ್ರಕಟಿತ
