ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಯಕ್ಷಗಾನ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಅಭಿನಂದನಾ ಸಮಿತಿಯು ವಾಗರ್ಥ ಗೌರವ ಕಾರ್ಯಕ್ರಮವನ್ನು ಉದ್ಘಾಟಿಸಿ ಏರ್ಪಡಿಸಿತ್ತು.
ಎರಡು ದಿನಗಳ ಕಾಲ ಸಂವಾದ, ವಿಚಾರ ಸಂಕಿರಣ, ತಾಳಮದ್ದಳೆ, ಬಯಲಾಟ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಮರ್ಶಕ ಡಾ. ರಮಾನಂದ ಬನಾರಿ ಮಾತನಾಡಿ, ಪ್ರತಿಯೊಂದರಲ್ಲೂ ಅಭೂತಪೂರ್ವವಾದ ಮಾಯಾಶಕ್ತಿ ಇರುತ್ತದೆ. ಆದ್ದರಿಂದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹಗುರವಾಗಿ ಕಾಣಬಾರದು ಎಂದು ಸಲಹೆ ಮಾಡಿದರು. ವಿಮರ್ಶಕ ಸೀತಾರಂ ಭಟ್ ದಾಮ್ಲೆ ಮಾತನಾಡಿ, ಯಕ್ಷಗಾನ, ತಾಳಮದ್ದಳೆಗಳು ಈಗ ಕಡಿಮೆಯಾಗಿವೆ ಎಂದು ವಿಷಾದಿಸಿದರು.
ಕುವೆಂಪು ವಿ.ವಿ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದ ಗೌಡ ಮಾತಡಿದರು. ಎಂ. ಬಾಲಚಂದ್ರ ಡೋಂಗ್ರೆ, ಪ್ರದೀಪಕುಮಾರ ಕಲ್ಕೂರ, ವಿದ್ವಾನ್ ಗ.ನಾ.ಭಟ್ಟ, ಡಾ. ಸುಧೀರ್ ಶೆಟ್ಟಿ, ರಘಪತಿ ತಾಮಣ್‍ಕರ್ ಮೊದಲಾದವರು ಭಾಗವಹಿಸಿದ್ದರು. ಸಂಶೋಧಕ, ಸಂಸ್ಕೃತಿ ಚಿಂತಕ, ಅರ್ಥಧಾರಿ, ಸಂಘಟಕ ಡಾ. ಎಂ. ಪ್ರಭಾಕರ ಜೋಶಿ ಅವರನ್ನು ಅಭಿನಂದಿಸಲಾಯಿತು. ಜೋಶಿ ಅವರನ್ನು ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ, ಸಂವಾದ, ಜೀವನ ಮತ್ತು ಸಾಧನೆ ಕುರಿತ ವಿಚಾರ ಸಂಕಿರಣ, ಅಂಬಾ ಪ್ರಸಂಗ, ಚಕ್ರಗ್ರಹಣ-ತಾಳಮದ್ದಳೆ ಪ್ರದರ್ಶನ, ರಾಧಾಂತರಂಗ-ಯಕ್ಷಗಾನ ಬಯಲಾಟ ಪ್ರದರ್ಶನ ಕಾರ್ಯಕ್ರಮಗಳು ಜರುಗಿದವು.
ಕನ್ನಡಪ್ರಭ ದಿನಾಂಕ 15-05-2017 ರಲ್ಲಿ ಪ್ರಕಟಿತ
