ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಉತ್ತರಕನ್ನಡ ಜಿಲ್ಲೆಯ ಕುಮಟಾದ ಡಾ.ಜಿ.ಎಲ್.ಹೆಗಡೆ ಮಣಕಿ ಅವರನ್ನು ನೇಮಕ ಮಾಡಲಾಗಿದೆ.
ಮುಂದಿನ ಆದೇಶದವರೆಗೆ ಅನ್ವಯಿಸುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದು ಈ ಆದೇಶವನ್ನು ಹೊರಡಿಸಿದೆ. ಜಿ.ಎಲ್.ಹೆಗಡೆ ಅವರು ಯಕ್ಷಗಾನ ಮೌಖಿಕ ಸಾಹಿತ್ಯಕ್ಕೆ ಲಿಖಿತ ರೂಪ ಕೊಡುವಲ್ಲಿ ಅಪಾರ ಶ್ರಮವಹಿಸಿದ್ದು, ಆ ನಿಟ್ಟಿನಲ್ಲಿ ಎರಡು ಕೃತಿಗಳನ್ನು ರಚಿಸಿದ್ದರು. ಈ ಹಿಂದೆ ಅಧ್ಯಕ್ಷರಾಗಿದ್ದ ಪ್ರೊ.ಎಂ.ಎ. ಹೆಗಡೆ ಅವರ ನಿಧನದಿಂದಾಗಿ ಈ ಸ್ಥಾನ ಖಾಲಿ ಉಳಿದಿತ್ತು.

