ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ ದಿವಂಗತ ಐರೋಡಿ ಸದಾನಂದ ಹೆಬ್ಬಾರರ ನೆನಪಿನಲ್ಲಿ ಪ್ರತೀ ವರ್ಷ ಆಚರಿಸುವ ಸಂಸ್ಕರಣಾ ಮತ್ತು ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭವು ಅ.24ರಂದು ಸಂಜೆ 5.30ಕ್ಕೆ ಸಾಲಿಗ್ರಾಮದ ಗುಂಡ್ಲಿಯಲ್ಲಿರುವ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ಕಲಾವಿದ, ಪ್ರಮುಖ ವಿಮರ್ಶಕ, ಸಂಶೋಧಕ, ಸಂಘಟಕ, ಖ್ಯಾತ ಅರ್ಥದಾರಿ ಡಾ. ಪ್ರಭಾಕರ ಜೋಷಿ ಅವರಿಗೆ ಪ್ರಸಕ್ತ ಸಾಲಿನ 2021ರ ಸದಾನಂದ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 2004ರಿಂದ ಈವರೆಗೆ ಅನಂತನಾರಾಯಣ ಐತಾಳ, ಕಾಂತಪ್ಪ ಮಾಸ್ತರ್, ಗೋವಿಂದ ಉರಾಳ, ವಿಶ್ವೇಶ್ವರ ಅಡಿಗ, ಮೋಹನ ಆಳ್ವ ಹರಿಕೃಷ್ಣ ಪುನರೂರ, ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ, ರಾಘವ ನಂಬಿಯಾರ್, ಕೃಷ್ಣಮೂರ್ತಿ ಮಂಜ, ಎಂ.ಎ. ಹೆಗಡೆ, ಮಣೂರು ನರಸಿಂಹ ಮಧ್ಯಸ್ಥ, ಡಾ.ನಾ.ಮೊಗಸಾಲೆ, ಕಂಬದಕೋಣೆ ಪ್ರಕಾಶ ರಾವ್, ಡಾ.ಟಿ. ಶ್ಯಾಮ ಭಟ್, ಜನಾರ್ದನ ಮರವಂತೆ, ಪ್ರಾಂಶುಪಾಲ
ಸದಾನಂದ ಐತಾಳರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.

