ಬೆಂಗಳೂರು ದೂರದರ್ಶನ ಚಂದನದಲ್ಲಿ ಭಾನುವಾರ ಪ್ರಸಾರವಾಗುವ ‘ಸೋದರ ಸಿರಿ’ ಕಾರ್ಯಕ್ರಮದಲ್ಲಿ ಈ ಬಾರಿ ವಿಶೇಷ ತುಳು ಯಕ್ಷಗಾನ ತಾಳಮದ್ದಳೆ ಮೂಡಿಬರಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು ಪ್ರಸ್ತುತಪಡಿಸುವ ‘ಮಾಯಕೊದ ಬಿನ್ನೆದಿ’ ತುಳು ತಾಳಮದ್ದಳೆಯ ಮೊದಲ ಕಂತು ಮೇ 17ರಂದು ಭಾನುವಾರ ಮಧ್ಯಾಹ್ನ ಗಂಟೆ 12.30 ಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ರಾಮಾಯಣದ ಶೂರ್ಪನಖಾ ಮಾನಭಂಗ ಕಥೆಯನ್ನಾಧರಿಸಿ ಹರೀಶ್ ಶೆಟ್ಟಿ ಸೂಡಾ ಅವರು ರಚಿಸಿದ ‘ಮಾಯಕೊದ ಬಿನ್ನೆದಿ’ ಪ್ರಸಂಗವನ್ನು ಭಾಸ್ಕರ ರೈ ಕುಕ್ಕುವಳ್ಳಿ ಅವರು ನಿರ್ದೇಶಿಸಿ ಮೂರು ಕಂತುಗಳಾಗಿ ವಿಂಗಡಿಸಿದ್ದಾರೆ. ಇದರಲ್ಲಿ ಕಲಾವಿದರಾಗಿ ಡಾ.ಎಂ.ಪ್ರಭಾಕರ ಜೋಶಿ (ಶೂರ್ಪನಖಾ), ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀರಾಮ), ಸದಾಶಿವ ಆಳ್ವ ತಲಪಾಡಿ (ಲಕ್ಷ್ಮಣ), ವಿಜಯಲಕ್ಷ್ಮಿ ಶಾನುಭಾಗ್ (ಸೀತೆ), ಅವಿನಾಶ್ ಶೆಟ್ಟಿ ಉಬರಡ್ಕ (ಖರಾಸುರ), ಡಾ.ಕೆ.ಕೆ. ಶಾನುಭಾಗ್ ಮತ್ತು ಡಾ.ಬಾಬಾ ಶಂಕರ ಆಳ್ವ (ಋಷಿಗಳು) ಅರ್ಥಧಾರಿಗಳಾಗಿ ಪಾತ್ರ ವಹಿಸಿದ್ದಾರೆ. ಭಾಗವತರಾಗಿ ಹರೀಶ್ ಶೆಟ್ಟಿ ಸೂಡಾ ಹಾಗೂ ಹಿಮ್ಮೇಳದಲ್ಲಿ ಅಕ್ಷಯ ರಾವ್ ವಿಟ್ಲ ಶ್ರೀಶ ರಾವ್ ನೆಡ್ಡೆ ಮತ್ತು ಕೀರ್ತನ್ ಪಳ್ಳಿ ಭಾಗವಹಿಸಿದ್ದಾರೆ.

ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು ಸಾದರ ಪಡಿಸುವ ಈ ಕಾರ್ಯಕ್ರಮವನ್ನು ಬೆಂಗಳೂರು ದೂರದರ್ಶನದ ಲಕ್ಷ್ಮೀ ಕಾರಂತ್ ಅವರು ನಿರ್ಮಿಸಿದ್ದು , ವೈಷ್ಣವ್ ರಾವ್ ಅವರು ನಿರೂಪಿಸಿ ಪ್ರಸಾರಕ್ಕೆ ಅಳವಡಿಸಿದ್ದಾರೆ. ಈ ತಾಳಮದ್ದಳೆಯ ದ್ವಿತೀಯ ಹಾಗೂ ತೃತೀಯ ಕಂತುಗಳು ಕ್ರಮವಾಗಿ 2020 ಮೇ 24 ಮತ್ತು 31 ರಂದು ಮಧ್ಯಾಹ್ನ 12:30 ಕ್ಕೆ ಪ್ರಸಾರವಾಗುವುದು ಎಂದು ಬೆಂಗಳೂರು ದೂರದರ್ಶನದ ಪ್ರಕಟಣೆ ತಿಳಿಸಿದೆ.

error: Content is protected !!
Share This