ಶೈಲಿಬದ್ಧ ಭಾಗವತಿಕೆಯ ಮೂರು ಮಜಲುಗಳನ್ನು ಕಂಡ ಬಲಿಪ ಪರಂಪರೆ ಹಾಗೂ ಯಕ್ಷಾಂಬಿಕೆಯ ಸೇವೆಯಲ್ಲಿ ತಲೆಮಾರಿನಸಂಪ್ರದಾಯವನ್ನು ಶ್ರದ್ದೆಯಿಂದ ಆಚರಿಸುತ್ತಿರುವ ಬೊಂಡಾಲ ಕುಟುಂಬ ಯಕ್ಷಗಾನದ ನೈಜ ಆರಾಧಕರು. ಇವೆರಡೂ ಯಕ್ಷಗಾನ ಕಲಾವಿದರು ಮತ್ತು ಕಲಾಪೋಷಕ ವಲಯದ ಸರ್ವ ಶ್ರೇಷ್ಠ ಮಾದರಿಗಳು ಎಂದು ಯಕ್ಷಗಾನ ವಿದ್ವಾಂಸ ಹಾಗೂ ಅರ್ಥದಾರಿ ಡಾ.ಎಂ. ಪ್ರಭಾಕರ ಜೋಶಿ ಹೇಳಿದ್ದಾರೆ.

ಬೊಂಡಾಲ ಚಾರಿಟೇಬಲ್ ಟ್ರಸ್ಟ್‌ನಿಂದ ಶಂಭೂರು ಗ್ರಾಮದ ಬೊಂಡಾಲದಲ್ಲಿ ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ 2 ದಿನಗಳ ಹರಕೆ ಬಯಲಾಟದ ವೇದಿಕೆಯಲ್ಲಿ ಏರ್ಪಡಿಸಿದ್ದ ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಕರಣೆ ಹಾಗೂ ಬೊಂಡಾಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಬಲಿಪ ಪ್ರಸಾದರಿಗೆ ಪ್ರಶಸ್ತಿ

ಈ ಸಂದರ್ಭದಲ್ಲಿ ಭಾಗವತ ಬಲಿಪ ಪ್ರಸಾದ ಭಟ್ಟರಿಗೆ ಮಾಜಿ ಸಚಿವ ಬಿ. ರಮಾನಾಥ ರೈ ಅವರು 2021-22 ನೇ ಸಾಲಿನ ಬೊಂಡಾಲ ಪ್ರಶಸ್ತಿ ನೀಡಿ ಗೌರವಿಸಿದರು. ಕಟೀಲು ಕ್ಷೇತ್ರದ ಅರ್ಚಕ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿದರು.

ಸಂಸ್ಕರಣಾ ಭಾಷಣ

ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಮತ್ತು ಯಕ್ಷಗಾನ ಅರ್ಥದಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾಡಿದರು.

ಬೊಂಡಾಲಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮತ್ತು ದುರ್ಗಾ ಫೆಸಿಲಿಟೀಸ್‌ ಸಂಸ್ಥೆಯ ಮುಖ್ಯಸ್ಥ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ನಾರಾಯಣ ಗೌಡ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟಿನ ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು.

ಯಲಾಟ ಪ್ರದರ್ಶನ

ಬಳಿಕ ಕಟೀಲು ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಒಂದನೇ ಮೇಳದವರಿಂದ
“ಶ್ರೀದೇವಿ ಮಹಾತ್ಮ” ಸೇವಾ ಬಯಲಾಟ ಜರಗಿತು.

error: Content is protected !!
Share This