ಯಕ್ಷಗಾನ, ಭರತನಾಟ್ಯ, ಕೂಚಿಪೂಡಿ ಮತ್ತು ಇತರೆ ನೃತ್ಯ ನಾಟ್ಯಸಂಪ್ರದಾಯಗಳ ಅನೇಕ ವಿಚಾರಗಳ ಹರಹಿನ ನೂತನ ಅಧ್ಯಯನಶೀಲ ಪುಸ್ತಕಗಳು. ಪ್ರಕಾಶನ : ಕರ್ನಾಟಕಯಕ್ಷಗಾನಅಕಾಡೆಮಿ ಲೇಖಕರು ಮತ್ತು ಸಂಪಾದಕರು ಡಾ. ಮನೋರಮಾ ಬಿ.ಎನ್
ಯಕ್ಷನೂಪುರ 160/- ಬೆಲೆ
ಲೇಖಕರು ಮತ್ತು ಸಂಪಾದಕರು ಡಾ. ಮನೋರಮಾ ಬಿ.ಎನ್
296 ಪುಟಗಳು

ಯಕ್ಷಗಾನದ ಸಹಿತ ಭಾರತೀಯ ಕಲಾಸಂಪ್ರದಾಯದಲ್ಲಿ ಗೆಜ್ಜೆಗಳು, ಅವುಗಳ ವಿಧ ಮತ್ತು ತಯಾರಿ ಕ್ರಮ, ಯಕ್ಷಗಾನದ ಕಿರೀಟ ನಿರ್ಮಾಣ ಮತ್ತು ಅವುಗಳ ವೈವಿಧ್ಯ, ಚಿಕ್ಕಮೇಳದ ವ್ಯವಸ್ಥೆ ಮತ್ತು ಚಿಕ್ಕಮೇಳ ನೇತೃತ್ವದಾರರ ಸಮ್ದರ್ಶನ, ಯಕ್ಷಗಾನ ಪ್ರಸಂಗಗಳನ್ನು ಭರತನಾಟ್ಯಾದಿಗಳಲ್ಲಿ ಅಳವಡಿಸುವ ಸಂಶೋಧನ ವಿಧಾನ, ಕಲೌಚಿತ್ಯದ ಹಿನ್ನೆಲೆಯಲ್ಲಿ ಭಾರತೀಯ ಕಲೆಗಳಲ್ಲಿ (ಯಕ್ಷಗಾನವನ್ನು ವಿಶೇಷವಾಗಿ ಲಕ್ಷಿಸಿ) ಅಬ್ರಾಹಾಮಿಕ್ ಮತಪ್ರಸಂಗ ಮತ್ತು ಪಾತ್ರವಿವೇಚನೆ, ಗೊಂಬೆಯಾಟದ ವಿಸ್ತೃತ ಪರಂಪರೆ, ಶೈಲಿ ಬಣ್ಣಗಾರಿಕೆ, ತಯಾರಿಯ ಕುರಿತ ವಿನೂತನ ಅಧ್ಯಯನ, ಯಕ್ಷೋತ್ಸವದ ಪರಿಕಲ್ಪನೆ ಮತ್ತು ಪ್ರಾತಿನಿಧಿಕ ವ್ಯವಸ್ಥೆಯ ಆಳ ಅಧ್ಯಯನ, ಹಾಗೂ ಸೂರಿಕುಮೇರು ಗೋವಿಂದ ಭಟ್ ಹಾಗೂ ಕರ್ಗಲ್ಲು ವಿಶ್ವೇಶ್ವರ ಭಟ್ಟರ ಬದುಕು-ಭಾವ-ಕಲಾಗಾಥೆಗಳ ನಿಡಿದಾದ ಅಧ್ಯಯನ ಸಂದರ್ಶನ ಮೊದಲಾದ ವಿಚಾರಗಳ ಕುರಿತ ಪ್ರಬುದ್ಧತೆಯುಳ್ಳ ಸಂಶೋಧನ ಕೃತಿ.
