ಉಡುಪಿ ವಿಧಾನ ಸಭಾ ವ್ಯಾಪ್ತಿಯ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಿರುವ ಯಕ್ಷಶಿಕ್ಷಣ ಟ್ರಸ್ಟ್ ಗುರುಗಳ ಸಮಾಲೋಚನಾ ಸಭೆ ಇಂದು 15-06-2022ರಂದು ಸಂಜೆ 5.30ಕ್ಕೆ ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಜರಗಿತು. 20 ಮಂದಿ ಯಕ್ಷಗುರುಗಳು ಸಭೆಯಲ್ಲಿ ಭಾಗವಹಿಸಿ ದ್ದರು. ಈ ವರ್ಷ ಸುಮಾರು 50 ಪ್ರೌಢ ಶಾಲೆಗಳಲ್ಲಿ ಯಕ್ಷಶಿಕ್ಷಣ ತರಬೇತಿ ನಡೆಸಲು ಉದ್ದೇಶಿಸಿದೆ. ಟ್ರಸ್ಟ್ ನ ವಿಶ್ವಸ್ಥರಾದ ಎಸ್.ವಿ. ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಯಕ್ಷಶಿಕ್ಷಣ ತರಬೇತಿಯು ಪರಿಣಾಮಕಾರಿಯಾಗಿ ನಡೆಸಿ ಈ ಅಭಿಯಾನವು ಯಶಸ್ವಿಗೊಳಿಸುವಲ್ಲಿ ಗುರುಗಳು ಸಹಕರಿಸಬೇಕೆಂದು ವಿನಂತಿಸಿದರು. ಗುರುಗಳಿಗೆ ಶಾಲೆಗಳನ್ನು ಹಂಚಿಕೆ ಮಾಡಿ ಜೂನ್ 25ರ ಒಳಗೆ ತರಗತಿಗಳನ್ನು ಪ್ರಾರಂಭಿಸಬೇಕೆಂದು ಸೂಚಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರುಗಳಾದ ಪ್ರೊ. ನಾರಾಯಣ ಎಂ. ಹೆಗಡೆ, ಹೆಚ್.ಎನ್. ಶೃಂಗೇಶ್ವರ ಹಾಗೂ ಮಂಜುನಾಥ ಉಪಸ್ಥಿತರಿದ್ದರು.
Yaksha Updates
- Yakshagana Legend Dr. M. Prabhakar Joshi | ಸಾಂಸ್ಕೃತಿಕ ಪರಂಪರೆಯ ಮಹಾನ್ ಚೇತನ
- ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ‘ಬಳ್ಕೂರು ಯಕ್ಷ ಕುಸುಮ’ ಪ್ರಶಸ್ತಿ ಪ್ರದಾನ
- ಸಮತೋಲನದ ಪುನರುತ್ಥಾನ ಪರ್ವ
- ಯಕ್ಷಲೋಕದ ಸವ್ಯಸಾಚಿಯ ಮಹಾಪ್ರಸ್ಥಾನ
- ಶ್ರೇಷ್ಠ ಕಲಾವಿದ ಕೆ. ಗೋವಿಂದ ಭಟ್ ನಿಧನ
- ಪುತ್ತಿಗೆ ರಘುರಾಮ ಹೊಳ್ಳರಿಗೆ ‘ಯಕ್ಷವಿದ್ಯಾಮಾನ್ಯ ಪ್ರಶಸ್ತಿ’
- ಮುಂಬಯಿಯಲ್ಲಿ ಯಕ್ಷಗಾನಕ್ಕೆ ರಾಜಾಶ್ರಯ – ಡಾ। ಎಂ. ಪ್ರಭಾಕರ ಜೋಶಿ
- ಶತಾವಧಾನಿ ಆರ್.ಗಣೇಶರಿಗೆ ಪದ್ಮಭೂಷಣ ಪ್ರಶಸ್ತಿ

