ಯಕ್ಷಗಾನ ಕಲಾರಂಗದ ದಾನಿ, ಉದ್ಯಮಿ ಗೋಕುಲನಾಥ ಪ್ರಭು ಅವರ ಪಲಿಮಾರಿನ ಮೂಲ ಮನೆಗೆ 15-06-2022ರಂದು ಸಂಸ್ಥೆಯ ತಂಡ ಭೇಟಿ ನೀಡಿ ಅವರ ತಾಯಿ ಪದ್ಮಾವತಿ ಪ್ರಭು ಅವರನ್ನು ಅಭಿನಂದಿಸಿ ಅವರ ಆಶೀರ್ವಾದ ಪಡೆಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ನೇತೃತ್ವದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆಕಾರ್ಯದರ್ಶಿಗಳಾದ ಪ್ರೊ. ನಾರಾಯಣ ಎಂ. ಹೆಗಡೆ, ಹೆಚ್.ಎನ್. ಶೃಂಗೇಶ್ವರ ಶತಾಯಿಷಿ ಪದ್ಮಾವತಿಯವರಿಗೆ ಶಾಲು, ಫಲವಸ್ತು ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಬಹಳ ಲವಲವಿಕೆಯಿಂದ ಮಾತನಾಡಿಸಿ ತನ್ನ ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ಈ ಸಂದರ್ಭದಲ್ಲಿ ಅವರ ಪುತ್ರಿಯರಾದ ಭಾರತಿ ಶೆಣೈ ಹಾಗೂ ಕಸ್ತೂರಿ ಪೈ ಜತೆಗಿದ್ದರು. 16-06-2022 ರಂದು ಗೋಕುಲನಾಥ ಪ್ರಭು ಅವರು ತಮ್ಮ ತಾಯಿಯ ಶತಾಬ್ಧದ ಪ್ರಯುಕ್ತ ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಪಾದೂರಿನಲ್ಲಿ ನಿರ್ಮಿಸಿದ ಮನೆ ‘ಪದ್ಮಾವತಿ’ ಉದ್ಘಾಟನೆಗೊಳ್ಳಲಿದೆ.

error: Content is protected !!
Share This