ಯಕ್ಷಗಾನ ಕಲಾವಿದ ಶಿವಮೊಗ್ಗ ಜಿಲ್ಲೆಯ ನರಸಿಂಹರಾಜಪುರ ನಿವಾಸಿ ಹೊಸಕೊಪ್ಪ ಶಿವರಾಮ ಶೆಟ್ಟಿ (69) 09-12-2021 ರಂದು ನಿಧನ ಹೊಂದಿದರು. ಅವರು ಪತ್ನಿ ಹಾಗೂ ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಗಂಭಿರ ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದ ಶಿವರಾಮ ಶೆಟ್ಟಿಯವರು ತೆಂಕು-ಬಡಗು ಎರಡೂ ತಿಟ್ಟುಗಳಲ್ಲಿ ಸಮರ್ಥ ವೇಷಧಾರಿಯಾಗಿದ್ದರು. ಮಂದಾರ್ತಿ, ಸಾಲಿಗ್ರಾಮ, ಕಮಲಶಿಲೆ, ಗೋಳಿಗರಡಿ, ಮಾರಣಕಟ್ಟೆ, ನಾಗರಕೋಡಿಗೆ, ಸೌಕೂರು, ಹೊಸಳ್ಳಿ, ರಂಜದಕಟ್ಟೆ ಮೇಳಗಳಲ್ಲಿ ಕಲಾಸೇವೆಗೈದಿದ್ದರು. ಕಟೀಲು ಮೇಳದಲ್ಲಿ ದೀರ್ಘಕಾಲ ಬಣ್ಣದ ವೇಷಧಾರಿಯಾಗಿ ಸೇವೆ ಗೈದ ಇವರು ಈ ವರ್ಷ ನಿವೃತ್ತರಾಗಿದ್ದರು. 2015ರಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!
Share This