ನಂಬಿಯಾರರ ಯಕ್ಷಸಂವಾದ

ಹಲವು ಸಲ ನಮ್ಮ ಅನಿಸಿಕೆಗಳು ಮನಸ್ಸಿನಲ್ಲಿ ಕಲ್ಪನೆಯ ಗರಿಗಳನ್ನು ಅರಳಿಸುತ್ತಿದ್ದರೆ ಮಾತಿನಲ್ಲಿ ಅವುಗಳು ನಿರ್ವಹಿಸುವುದಿಲ್ಲ. ಅಥವಾ ಅದನ್ನು ನಿರ್ವಹಿಸುವ ಸಾಮಾರ್ಥ್ಯ ಇರುವುದಿಲ್ಲ ಎನ್ನುವುದೇ ಸರಿ. ಷಡ್ರಸ ಭೋಜನದಲ್ಲಿ ಯಾವುದೋ ಒಂದು ಕೊರತೆ ಕಂಡಾಗ ಎಲ್ಲವೂ ಸರಿ ಇದೆ ಆದರೂ ಒಂದು ಅತೃಪ್ತಿ ಅದು ಹೇಳುವುದಕ್ಕೆ ಅರಿಯದೇ ಅದು...

ಜಾನಕೀ ನೀಡುವ ಯಕ್ಷಮಣಿ ಚೂಡಾಮಣಿ

“ಶ್ರೀರಾಮಾ… ಕರಕಂಜದಂಗುಲಿಯೊಳಿಟ್ಟಾ ಮುದ್ರೆಯಂ ನೋಡುತಂ | ನಾರೀ ಜಾನಕಿ ಶೋಕಿಸುತಾ ಅದನಂ ಕಂಗಳ್ಕೆ ತಾ ಒತ್ತುತಂ | ಹೇರಾಳಾಸ್ರುತ ಶೋಕ ಬಿಂದು ಜಲದಿಂ ಸರ್ವಾಂಗಮಮ್ ಲೇಪಿಸಲ್|  ಕಾರುಣ್ಯಾಂಬುದಿ ರಾಮ ರಾಮಾ ಎನುತ ಆಶಾಭಾವದಿಂ ಕಂಡಳು… ಶ್ರೀರಾಮಾ…” ಗಂಗಾನದಿಯ ಪ್ರವಾಹದಂತೆ ಒಮ್ಮೆ ಮಂದಗಾಮಿನಿಯಾಗಿ ಮಗುದೊಮ್ಮೆ...

ತಾಳಮದ್ದಲೆ – ಸರಳ ವಿರಳ ರಿಕ್ತ ಸಶಕ್ತ ರಂಗ

– ಡಾ. ಎಂ. ಪ್ರಭಾಕರ ಜೋಶಿ ಹೌದು, ಇದೆಲ್ಲವೂ ನಿಜ, ಪ್ರಾಸವಲ್ಲ, – ಕನ್ನಡದ ವಿಶಿಷ್ಟ ಮೌಖಿಕ ಕಲೆ ತಾಳಮದ್ದಲೆಯ ಬಗೆಗೆ ಇನ್ನಷ್ಟು ನಿಜ. ತನ್ನ ಸ್ವರೂಪ, ಸೃಜನಶೀಲತೆ, ಸಾಧ್ಯತೆ, ಶ್ರೀಮಂತಿಕೆಗಳಲ್ಲಿ ಈ ಎಲ್ಲ ವಿಶೇಷಣಗಳಿಗೆ ಅದು ಅರ್ಹವಾಗಿದೆ. ನಾಲ್ಕಾರು ಕಲಾವಿದರು, ಒಬ್ಬ ಹಾಡುಗಾರ, ಒಬ್ಬ ವಾದಕ, ಒಂದಿಷ್ಟು ಸ್ಥಳ-...
ನೆನೆಪಲ್ಲಿ ಜೀವಂತರು – ಪ್ರತ್ಯೇಕ ಯೋಗ್ಯತೆಯ ಕಲಾವಿದ – ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ

ನೆನೆಪಲ್ಲಿ ಜೀವಂತರು – ಪ್ರತ್ಯೇಕ ಯೋಗ್ಯತೆಯ ಕಲಾವಿದ – ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ

– ಡಾ. ಎಂ. ಪ್ರಭಾಕರ ಜೋಶಿ ಐವತ್ತೊಂಬತ್ತರ ವಯಸ್ಸಿನಲ್ಲಿ, ಸಾಧನೆಯ ಒಂದು ಹಂತ ತಲುಪಿ, ಪಕ್ವವಾದ ಇನ್ನಷ್ಟು ಎತ್ತರದ ಸಾಧ್ಯತೆಗಳ ಕಾಲಕ್ಕೆ ಬರುತ್ತಲೇ ಆಗಲಿದ, ಬಹುವಿಧ ಸಾಮರ್ಥ್ಯದ ಕಲಾವಿದ – ಕವಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ. ಆಟ, ತಾಳಮದ್ದಳೆ, ಸಂಘಟನೆಗಳಿಗೆಲ್ಲ ಅಗತ್ಯವಿದ್ದ, ಬಹೂಪಯೋಗಿ. ಆದರೆ ಅಷ್ಟೇ...

ಬಹುವಿಧ ಸಾಧನೆಯ ಚೈತನ್ಯಶಾಲಿ ದಿ| ಪುಚ್ಚಕೆರೆ ಕೃಷ್ಣಭಟ್ಟರು

– ಡಾ. ಎಂ. ಪ್ರಭಾಕರ ಜೋಶಿ ಈ ವರ್ಷ ಅದೇನೋ ಯಕ್ಷಗಾನ ರಂಗಕ್ಕೆ ನಷ್ಟದ ಕಾಲ. ಇದೀಗ -ಕಲಾವಿದ, ಅಧ್ಯಾಪಕ, ಸಂಘಟಕ ವಿದ್ವಾನ್ ಪುಚ್ಚಕೆರೆ ಕೃಷ್ಣಭಟ್ಟರ ಅಗಲಿಕೆ. ಕಲೆ, ಶಿಕ್ಷಣಗಳಲ್ಲಿ ಪುಚ್ಚಕೆರೆ- ಅನುಪಮ ಸಾಧಕ. ಬಂಟ್ವಾಳ-ಮಂಚಿ ಗ್ರಾಮದ ಪುಚ್ಚಕೆರೆಯ ನೂಜಿಬೈಲು ಮನೆತನದ ಭಟ್ಟರು ಬಾಲ್ಯದಲ್ಲೆ ಕಲೆಯ ಸೆಳೆತಕ್ಕೆ ಸಿಕ್ಕವರು....

ನೆನಪು – ಕಲಾವಿದ ಕಲಾಭಿಮಾನಿ ವಿ.ಎಸ್.ಶಿವರಾಯರು

– ಡಾ. ಎಂ. ಪ್ರಭಾಕರ ಜೋಶಿ ದಿ| ವಿ.ಎಸ್. ಶಿವರಾವ್, ಮಂಗಳೂರು ವಲಯದ ಯಕ್ಷಗಾನ ಕ್ಷೇತ್ರದಲ್ಲಿ ಕಲಾಪ್ರೀತಿಯ ಸಂಕೇತವಾಗಿದ್ದವರು. ನಮಗವರು ಪರಂಗಿಪೇಟೆ ಶಿವರಾಯರು. ಕಾರಣ ಅಲ್ಲಿ ಅವರು ಬಹುಕಾಲ ವೈದ್ಯ ಸಹಾಯಕರಾಗಿ, ಆ ಬಳಿಕ ವೈದ್ಯರಾಗಿ ಇದ್ದವರು. ಬಾಲ್ಯದಿಂದಲೂ ಯಕ್ಷಗಾನದ ಅಭಿಮಾನಿ. ಹಿರಿಯರಿಂದ ಕಲೆಯ ಆಸಕ್ತಿ ಪಡೆದು...
error: Content is protected !!